ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಕೊಳವೆ ಬಾವಿಯಲ್ಲಿದ್ದ ಬಾಲಕ ಸಾವು
webdunia
ಜೈಪುರದಲ್ಲಿ ಕೊಳವೆ ಬಾವಿಯೊಂದರೊಳಗೆ ಬಿದ್ದು ಜೀವಂತ ಸಿಕ್ಕಿಹಾಕಿಕ್ಕೊಂಡಿದ್ದ ಐದರ ಹರೆಯದ ಬಾಲಕ ಸೂರಜ್‌‍ನನ್ನು ಹೊರತೆಗೆಯಲಾಗಿದೆಯಾದರೂ ಆತ ಮೃತಪಟ್ಟಿದ್ದಾನೆ.

ಬಾಲಕನನ್ನು ಹೊರತೆಗೆಯಲು ನಿರಂತರವಾಗಿ 50 ಗಂಟೆಗಳವಧಿಯ ಕಾರ್ಯಾಚರಣೆ ನಡೆಸಲಾಗಿತ್ತು.ಶುಕ್ರವಾರ ರಾತ್ರಿಯ ವೇಳೆಗೆ ಆತನನ್ನು ಹೊರ ತೆಗೆಯುವಲ್ಲಿ ಕಾರ್ಯಾಚರಣೆ ತಂಡಕ್ಕೆ ಸಾಧ್ಯವಾಯಿತಾದರೂ , ಅದಾಗಲೇ ಆತ ಮೃತಪಟ್ಟಿದ್ದನು.

ಬಾಲಕ ಸೂರಜ್‌ನನ್ನು ಹೊರತೆಗೆಯಲು ಸೇನೆಯನ್ನೂ ಬಳಸಿಕೊಳ್ಳಲಾಗಿತ್ತು. ಕೊಳವೆ ಬಾವಿಗೆ ಸಮಾಂತರವಾಗಿ ಬಾವಿ ತೋಡಿ ಬಾಲಕನನ್ನು ರಕ್ಷಿಸುವುದು, ಹೊಂಡತೋಡುವುದಕ್ಕಾಗಿ ಅತ್ಯಾಧುನಿಕ ಯಂತ್ರಗಳನ್ನು ಬಳಸಲಾಗಿತ್ತು.

ಜೈಪುರದ ಮುದಿಯಾ ರಾಮ್ಸರ್ ಎಂಬಲ್ಲಿನ ನಿವಾಸಿಯಾದ ನತದೃಷ್ಟ ಬಾಲಕ ಸೂರಜ್ ಬುಧವಾರದಂದು ಆಟವಾಡುತ್ತಿದ್ದಾಗ ಮುಚ್ಚುಗೆ ಇಲ್ಲದ ಕೊಳವೆಬಾವಿಯೊಳಗೆ ಜಾರಿ ಬಿದ್ದಿದ್ದನು. ಸುಮಾರು 180 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದನು.

ರಕ್ಷಣಾ ಕಾರ್ಯಾಚರಣೆಯಲ್ಲಿ ತಜ್ಞರು, ಇಂಜಿನಿಯರುಗಳು,ಅಗ್ನಿಶಾಮಕ ದಳದ ಅಧಿಕಾರಿಗಳು ಸೇನಾಸಿಬ್ಬಂದಿಗಳಿಗೆ ನೆರವಾಗಿದ್ದರು.
ಮತ್ತಷ್ಟು
ಅಕಮ ಆಸ್ತಿ:ಅಧಿಕಾರಿ ಮನೆಗೆ ದಾಳಿ
ಯುಎನ್‌ಪಿಎ ಯಶಸ್ವಿಯಾಗಲಾರದು: ಸಿಪಿಐ(ಎಂ)
ಕೊಳವೆ ಬಾವಿಯ ಬಾಲಕ ಇನ್ನೂ ಜೀವಂತ
ಮುಂದಿನ ದಶಕದಲ್ಲಿ ನೀರಿನ ಕೊರತೆ-ಪಿಎಂ
ಭೈರೋನ್ ಸಿಂಗ್ ರಾಜಿನಾಮೆ ಅಗತ್ಯವಿಲ್ಲ
ವಿಯೆಟ್ನಾಂ ಪ್ರಧಾನಿ ಆಗಮನ