ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ದೇಶದಲ್ಲಿ ಏಡ್ಸ್ 50ಶೇ. ಕುಸಿತ
webdunia
ದೇಶದಲ್ಲಿ ಮಾರಕ ಎಚ್‌ಐವಿ ಹಾಗೂ ಏಡ್ಸ್ ರೋಗ ಬಾಧಿತರ ಪ್ರಮಾಣ 50 ಶೇಕಡ ಇಳಿಮುಖವಾಗಿದೆ ಎಂಬ ನೆಮ್ಮದಿದಾಯಕ ಅಂಶವನ್ನು ಸರ್ಕಾರ ಪ್ರಕಟಿಸಿದ್ದು, ನೂತನ ವರದಿ ಈ ಅಂಶ ಬಹಿರಂಗ ಪಡಿಸಿದೆ.

ದೇಶದಲ್ಲೀಗ ಈ ರೋಗ-ಲಕ್ಷಣವುಳ್ಳವರ ಸಂಖ್ಯೆ 2.5 ದಶಲಕ್ಷ ಎಂಬುದಾಗಿ ಅಧಿಕೃತ ಮಾಹಿತಿ ತಿಳಿಸಿದೆ. ರೋಗದ ಬೆಳವಣಿಗೆಯು ಈ ಹಿಂದಿಗಿಂತ 0.9ಶೇಕಡಕ್ಕಿಂತ ಕಡಿಮೆ ಇದೆ ಎಂಬುದಾಗಿ ಕೇಂದ್ರ ಸರ್ಕಾರದ ಆರೋಗ್ಯ ಖಾತೆ ಸಚಿವ ಅನ್ಬುಮಣಿ ರಾಮದಾಸ್ ಅವರು ತಿಳಿಸಿದ್ದಾರೆ.

ದೇಶದಲ್ಲಿ ಏಡ್ಸ್- ಎಚ್‌ಐವಿ ರೋಗಬಾಧೆಯ ಸಂಖ್ಯೆಯನ್ನು ಮುಂದಿನ ಐದು ವರ್ಷಗಳಲ್ಲಿ ಗಮನಾರ್ಹವಾಗಿ ಕಡಿಮೆ ಗೊಳಿಸಲು ಉದ್ದೇಶಿಸಲಾಗಿದೆ. 2011ರ ವೇಳೆಗೆ ಏಡ್ಸ್-ಎಚ್‌ಐವಿ ಪ್ರಮಾಣವನ್ನು ಹಿಮ್ಮೆಟ್ಟಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ದೇಶದಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಯೋಜನೆಯ 3ನೇ ಹಂತ ಅನುಷ್ಠಾನಗೊಳ್ಳುವುದರೊಂದಿಗೆ ರೋಗದ ಪ್ರಮಾಣ ಅರ್ಧಾಂಶಕ್ಕಿಳಿಯಲಿದೆ. ಅಲ್ಲದೆ ವ್ಯಾಪಿಸುವ ಪ್ರಮಾಣವೂ ಹಿನ್ನಡೆಯಾಗಲಿದೆ ಎಂಬುದು ಕೇಂದ್ರ ಸರ್ಕಾರ ಹೊರಗಿಳಿಸಿದ ಮಾಹಿತಿಯ ಸ್ಥೂಲ ಅಂಶ.

ಕೇಂದ್ರ ಸಚಿವ ಅನ್ಬುಮಣಿ ರಾಮದಾಸ್ ತಿಳಿಸಿರುವಂತೆ ನವೀಕರಿಸಿದ ಅಂಕೆಸಂಖ್ಯೆಗಳಂತೆ ದೇಶದಲ್ಲಿ ಎಚ್‌ಐವಿ ರೋಗಬಾಧಿತರ ಸಂಖ್ಯೆ 2.5 ದಶಲಕ್ಷ ಎಂಬುದನ್ನು ಬಹಿರಂಗ ಪಡಿಸಿದ್ದು, ಎಲ್ಲಾ ಜನರ ಸಹಕಾರವಿದ್ದರೆ ಮಾರಕ ರೋಗವನ್ನು ನಿಯಂತ್ರಿಸಲು ಸಾಧ್ಯ ಎಂದಿದ್ದಾರೆ.
ಮತ್ತಷ್ಟು
ಕೊಳವೆ ಬಾವಿಯಲ್ಲಿದ್ದ ಬಾಲಕ ಸಾವು
ಅಕಮ ಆಸ್ತಿ:ಅಧಿಕಾರಿ ಮನೆಗೆ ದಾಳಿ
ಯುಎನ್‌ಪಿಎ ಯಶಸ್ವಿಯಾಗಲಾರದು: ಸಿಪಿಐ(ಎಂ)
ಕೊಳವೆ ಬಾವಿಯ ಬಾಲಕ ಇನ್ನೂ ಜೀವಂತ
ಮುಂದಿನ ದಶಕದಲ್ಲಿ ನೀರಿನ ಕೊರತೆ-ಪಿಎಂ
ಭೈರೋನ್ ಸಿಂಗ್ ರಾಜಿನಾಮೆ ಅಗತ್ಯವಿಲ್ಲ