ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಒಂದು ಅಭ್ಯಾಸ ಪಂದ್ಯ ಆಘಾತಕಾರಿ-ಚಾಪೆಲ್
webdunia
ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ತಂಡಕ್ಕೆ ಕೇವಲ ಒಂದು ಅಭ್ಯಾಸ ಪಂದ್ಯವನ್ನು ಆಯೋಜಿಸಿರುವುದು ತಂಡವನ್ನು ಅಪೂರ್ಣ ಸಿದ್ದತೆಯಲ್ಲಿಡಬಹುದು ಎಂದು ಮಾಜಿ ಟೀಮ್ ಇಂಡಿಯಾ ಕೋಚ್ ಗ್ರೆಗ್ ಚಾಪೆಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 20 ರಂದು ಒವಲ್‌ನಲ್ಲಿ ವಿಕ್ಟೊರಿಯಾ ತಂಡದ ವಿರುದ್ದ ಮೂರು ದಿನಗಳ ಒಂದು ಅಭ್ಯಾಸ ಪಂದ್ಯವನ್ನು ಆಡಲಿದೆ. ಆಸ್ಟ್ರೇಲಿಯಾದ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿ ಸಲಹೆಗಾರ ಎಂದು ಸೇವೆ ಸಲ್ಲಿಸಲು ಚಾಪೆಲ್ ಒಪ್ಪಿಕೊಂಡಿದ್ದಾರೆ.

ಪ್ರವಾಸಿ ತಂಡಕ್ಕೆ ಸ್ಥಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಇರುವುದಿಲ್ಲ.ಅದರಲ್ಲಿಯೂ ಆಸಿಸ್ ನೆಲದಲ್ಲಿನ ವೇಗದ ಪಿಚ್‌ಗಳಿಗೆ ಹೊಂದಿಕೊಳ್ಳಲು ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.

ವಿದೇಶದ ಪಿಚ್‌ಗಳ ಮೇಲೆ ಆಡುವ ಸಮಯದಲ್ಲಿ ಹೆಚ್ಚಿನ ಸಮಯ ಮತ್ತು ಅಭ್ಯಾಸ ಪಂದ್ಯಗಳು ಇದ್ದರೆ ಒಳ್ಳೆಯದು ಆದರೆ ಇಂದಿನ ಬಿಗಿಯಾದ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮಗಳು ಇದಕ್ಕೆ ಅವಕಾಶ ನೀಡುವುದಿಲ್ಲ.

ಭಾರತದಂತೆ ಶ್ರೀಲಂಕಾದ ಪರಿಸ್ಥಿತಿ ಇದ್ದು ಭಾರತ ಮರಳಿದ ನಂತರ ಕಾಂಗರೂಗಳ ವಿರುದ್ದ ಆಡಲಿದ್ದು ಅದು ಕೂಡ ಸರಣಿಗೆ ಮುನ್ನ ಒಂದು ಅಭ್ಯಾಸ ಪಂದ್ಯವನ್ನು ಆಡಲಿದೆ.
ಮತ್ತಷ್ಟು
ದೇಶದಲ್ಲಿ ಏಡ್ಸ್ 50ಶೇ. ಕುಸಿತ
ಕೊಳವೆ ಬಾವಿಯಲ್ಲಿದ್ದ ಬಾಲಕ ಸಾವು
ಅಕಮ ಆಸ್ತಿ:ಅಧಿಕಾರಿ ಮನೆಗೆ ದಾಳಿ
ಯುಎನ್‌ಪಿಎ ಯಶಸ್ವಿಯಾಗಲಾರದು: ಸಿಪಿಐ(ಎಂ)
ಕೊಳವೆ ಬಾವಿಯ ಬಾಲಕ ಇನ್ನೂ ಜೀವಂತ
ಮುಂದಿನ ದಶಕದಲ್ಲಿ ನೀರಿನ ಕೊರತೆ-ಪಿಎಂ