ಬ್ರಿಟನ್‌ನಲ್ಲಿ ವಿಫಲಸ್ಫೋಟಪ್ರಯತ್ನದ ಆರೋಪಿ ಭಾರತೀಯವೈದ್ಯ ಹನೀಫ್‌ನ ಭಯೋತ್ಪಾದಕ ಹಿನ್ನೆಲೆಯ ಕುರಿತಾಗಿ ತನಿಖಾದಳ ವಿಚಾರಣೆ ತೀವ್ರಗೊಳಿಸಿದೆ.
ಬ್ರಿಟಿಷ್ ಉಗ್ರಗಾಮಿ ನಿಗ್ರಹ ಅಧಿಕಾರಿಗಳು ಹಾಗೂ ಆಸ್ಟ್ರೇಲಿಯಾ ಪೊಲೀಸರ ಜಂಟಿ ತಂಡದ ಅಧಿಕಾರಿಗಳು ಇದೀಗ ಹನೀಫ್‌ನನ್ನು ಬಂಧನದಲ್ಲಿರಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬ್ರಿಸ್ಬೇನ್‌ನಲ್ಲಿ ನೋಂದಾಯಿತ ವೈದ್ಯ ಎಂಬ ನೆಲೆಯಲ್ಲಿ ಗೋಲ್ಡ್ ಕೋಸ್ಟ್ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿದ್ದ ಹನೀಫ್‌ನನ್ನು ಸೋಮವಾರದಿಂದ ತನಿಖಾ ತಂಡ ವಶದಲ್ಲಿರಿಸಿದೆ.
ಘಟನೆಗಳ ಹಿನ್ನೆಲೆಯಲ್ಲಿ ದೇಶ ಬಿಟ್ಟು ಹೊರಡಲು ನಿರ್ಧರಿಸಿದ್ದ ಆತನನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅಲ್ಲಿನ ಕಾನೂನಿನ ಸೌಲಭ್ಯ ಪಡೆದಿರುವ ತನಿಖಾ ತಂಡ ಇಂದು ಬೆಳಗ್ಗೆ 11.30ರವರೆಗೆ ಹನೀಫ್‌ನನ್ನು ತನಿಖೆಗೊಳಪಡಿಸಿದೆ. ಅಗತ್ಯವೆಂದಾದಲ್ಲಿ ಕಾನೂನುಕ್ರಮಕ್ಕೊಳಪಡಿಸಲೂ ಇದರಿಂದ ಸಾಧ್ಯವಿದೆ.
|