ದೇಶದ ಮಾಜಿ ಪ್ರಧಾನ ಮಂತ್ರಿ ಡಾ. ಚಂದ್ರ ಶೇಖರ್ (80)ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಅವರು ಕೆಲಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದರು.
ಇಂದು ಬೆಳಗಿನ ಜಾವ 8.45ರ ಸುಮಾರಿಗೆ ಅವರು ನಿಧನಹೊಂದಿರುವುದಾಗಿ ಅವರನ್ನು ಶುಶ್ರೂಷಿಸುತ್ತಿದ್ದ ಅಪೋಲೊ ಆಸ್ಪತ್ರೆಯ ಅಧಿಕೃತ ಪ್ರಕಟಣೆ ಬಹಿರಂಗ ಪಡಿಸಿದೆ.
ಚಂದ್ರಶೇಖರ್ ಅವರು ಕಳೆದ ಮೂರು ತಿಂಗಳುಗಳ ಕಾಲದಿಂದ ಅನಾರೋಗ್ಯ ನಿಮಿತ್ತ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರಿಗೆ ರಕ್ತ ಸಂಬಂಧಿತ ಕ್ಯಾನ್ಸರ್ ಖಾಯಿಲೆ ( ಮಲ್ಟಿಪಲ್ ಮಯೋಪಿಯ) ಬಾಧಿಸಿತ್ತು ಎಂಬುದಾಗಿ ವೈದ್ಯ ಡಾ. ಪ್ರಕಾಶ್ ಛೋಪ್ರ ತಿಳಿಸಿದ್ದಾರೆ.
ಸಂಸದರಾಗಿದ್ದ ಚಂದ್ರ ಶೇಖರ್ ಅವರು ಪಂಕಜ್ ಸಿಂಗ್ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಾಜಿ ಪ್ರಧಾನಿಯ ಕಳೇಬರವನ್ನು ಸಾರ್ವಜನಿಕ ಅಂತ್ಯದರ್ಶನಕ್ಕಾಗಿ ಅಧಿಕೃತ ನಿವಾಸದಲ್ಲಿ ಇರಿಸಲಾಗುವುದು ಎಂಬುದಾಗಿ ಪುತ್ರ ಸಿಂಗ್ ತಿಳಿಸಿದ್ದಾರೆ.
|