ವಿಶ್ವದ ನೂತನ ಸಪ್ತ ವಿಶ್ವ ವಿಸ್ಮಯಗಳ ಯಾದಿಯಲ್ಲಿ ಭಾರತದ ಐತಿಹಾಸಿಕ ಪ್ರೇಮಸ್ಮಾರಕ ತಾಜ್‌ಮಹತ್ ಸೇರ್ಪಡೆಗೊಂಡು ಘೋಷಣೆಯಾಗಿದೆ. ವಿಶ್ವದ ಜನತೆ ಈ ಕುರಿತು ಮತ ಚಲಾಯಿಸಿದ್ದರು.
ವಿಶ್ವದ ಏಳು ವಿಸ್ಮಯಗಳಲ್ಲಿ ಸೇರ್ಪಡೆಗೊಂಜಿರುವ ಇತರ ಪ್ರಾಚೀನ ನಿರ್ಮಾಣಗಳು ಇಂತಿವೆ. ಚೀನಾ ದೇಶದ ಮಹಾಗೋಡೆ,ಜೋರ್ಡಾನ್‌ನ ಪೆಟ್ರಾ, ಬ್ರೆಝಿಲ್ ನಲ್ಲಿರುವ ಕ್ರಿಸ್ತ ಪ್ರತಿಮೆ, ಪೆರುವಿನ ಮಚುಪಿಚು,ಮೆಕ್ಸಿಕೊದ ಸಿಚೆನ್ ಇಟ್ಸಾ ಪಿರಾಮಿಡ್, ರೋಮಿನ ಕೊಲಾಸಿಯಂಗಳಾಗಿವೆ.
ಸಹಸ್ರಾಬ್ದದ ಕ್ಯಾಲೆಂಡರ್ ವಿಸ್ಮಯ ದಿನಾಂಕವಾದ ಶನಿವಾರ (07-07-07)ದಂದು ವಿಶ್ವವಿಸ್ಮಯಗಳನ್ನು ಪ್ರಕಟಿಸಿರುವುದು ವಿಶೇಷ. ಲಿಸ್ಬೆನ್‌ನಲ್ಲಿ ಜರುಗಿದ ಭವ್ಯ ಕಾರ್ಯಕ್ರಮದಲ್ಲಿ ಈ ಘೋಷಣೆ ನಡೆಸಲಾಗಿದೆ.
ತಾಜ್‌ಮಹಲ್‌ನ್ನು ಪ್ರೇಮದಸ್ಮಾರಕವಾಗಿ ಬಣ್ಣಿಸಲಾಗಿದೆ.ಸ್ವಿಝರ್ಲೆಂಡ್‌ನ ಸೇವಾ ಸಂಸ್ಥೆಯೊಂದು ನೂತನ ವಿಶ್ವ ವಿಸ್ಮಯಗಳ ಆಯ್ಕೆಗಾಗಿ ಜಗತ್ತಿನ ಜನತೆಯಲ್ಲಿ ಮತ ಚಲಾಯಿಸಲು ಕೋರಿದ್ದರು.ಆನ್ ಲೈನ್ ಅಥವಾ ಎಸ್‌ಎಂಎಸ್ ಮೂಲಕ ಅಭಿಪ್ರಾಯ ತಿಳಿಸಲು ಅವಕಾಶವಿತ್ತು.
ಎಲ್ಲಾ ಆಯ್ಕೆಗಳಿಗೆ ಭಾರತದಿಂದ ಭಾರೀ ಎಸ್‌ಎಂಎಸ್ ಗಳ ಪ್ರವಾಹವೇ ಹರಿದಿತ್ತು. ಪ್ರಾರಂಭದಲ್ಲಿ 8 ಶೇಕಡ ಪ್ರಮಾಣವಿದ್ದ ಸಂದೇಶಗಳು ಬಳಿಕ 13ಕ್ಕೇರಿರುವುದು ಭಾರತವೂ ತಾಂತ್ರಿಕತೆಯಲ್ಲಿ ಹಿಂದುಳಿದಿಲ್ಲ ಎಂಬುದನ್ನು ಸೂಚಿಸಿದೆ.
|