ಬ್ರಿಟನ್‌ನಲ್ಲಿ ಸ್ಫೋಟ ಸಂಚಿಗಾಗಿ ಬಂಧನದಲ್ಲಿರುವ ಕನ್ನಡಿಗ ವೈದ್ಯ ಸೋದರರಾದ ಸಬೀಲ್ ಅಹ್ಮದ್ ಹಾಗೂ ಕಫೀಲ್ ಅಹ್ಮದ್ ಅವರ ಬೆಂಗಳೂರು ಮನೆಯಿಂದ ಇಸ್ಲಾಂ ಸ್ವಾತಂತ್ರ್ಯ ಹೋರಾಟ ಜೆಹಾದಿಯ ಕಂಪಾಕ್ಟ್ ಡಿಸ್ಕ್‌ಗಳು ಲಭಿಸಿವೆ.
ಸುದ್ದಿ ಸಂಸ್ಥೆಗೆ ಲಭ್ಯವಾಗಿರುವ ಮಾಹಿತಿಯಂತೆ ಪ್ರಸ್ತುತ ಸೀಡಿಗಳಲ್ಲಿ ಉಗ್ರಗಾಮಿ ಚಟುವಟಿಕೆಗಳ ಸಮಗ್ರ ಮಾಹಿತಿ ಇದೆ. ಇದನ್ನು ಕರ್ನಾಟಕ ಪೊಲೀಸರು ನಡೆಸಿರುವ ಧಾಳಿಯಲ್ಲಿ ವಶಪಡಿಸಿಕೊಂಡಿದ್ದಾರೆ.
ಅಹ್ಮದ್ ಸೋದರರ ಸಹವರ್ತಿಗಳಿಗಾಗಿ ಕರ್ನಾಟಕದ ರಾಜಧಾನಿ, ಮತ್ತಿತರ ನಗರಗಳಲ್ಲಿ ಪೊಲೀಸರು ತಲಾಶೆ ಮುಂದುವರಿಸಿದ್ದಾರೆ.
ಕಫೀಲ್ ಅಹ್ಮದ್ ವೃತ್ತಿಯಲ್ಲಿ ವಾಯುಯಾನ ಇಂಜಿನಿಯರ್ ಆಗಿದ್ದು, ಉಗ್ರಗಾಮಿ ಸಂಘಟನೆಗಾಗಿ ಈತ ಇತ್ತೀಚಿನ ಬ್ರಿಟನ್ ಪ್ರಕರಣದಲ್ಲಿ ಬೆಂಕಿಹಚ್ಚಿಸಿಕೊಂಡ ಜೀಪ್‌ನ್ನು ವಿಮಾನ ನಿಲ್ದಾಣದ ಟರ್ಮಿನಲ್‌ಗೆ ನುಗ್ಗಿಸಿದ್ದ.
ಕೃತ್ಯದ ವೇಳೆ ತೀವ್ರ ಸುಟ್ಟಗಾಯಗಳಿಗೊಳಗಾದ ಕಫೀಲ್‌ಗೆ ಬ್ರಿಟನ್‌ನಲ್ಲಿರುವ ಗ್ಲಾಸ್ ಹೌಸ್ ಆಸ್ಪತ್ರೆಯಲ್ ಚಿಕಿತ್ಸೆ ನೀಡಲಾಗಿತ್ತು. ಆದರೆ ಈತನ ಸೋದರ ಸಬೀಲ್‌ನನ್ನು ಲಿವರ್ ಪೂಲ್‌ನಲ್ಲಿ ಬಂಧಿಸಲಾಗಿತ್ತು. ಇವರ ಸಂಬಂಧಿಕ ಹನೀಫ್ ಇನ್ನೂ ವಿಚಾರಣಾಧೀನತೆಯಲ್ಲಿದ್ದಾನೆ.
|