ಕೋಮು ಸೌಹಾರ್ದತೆಗೆ ಭಂಗವುಂಟು ಮಾಡುವ ಭಾಷಣನೀಡಿದರು ಎಂಬ ಆರೋಪದನ್ವಯ ಭಾರತೀಯ ಜನಶಕ್ತಿ ಪಕ್ಷದ ಸ್ಥಾಪಕಾಧ್ಯಕ್ಷೆ ಉಮಾ ಭಾರತಿ ವಿರುದ್ಧ ಪೊಲೀಸರು ಮೊಕದ್ಧಮೆ ದಾಖಲಿಸಿದ್ದಾರೆ.
ಇಲ್ಲಿನ ರಾಮಸೇತು ( ಆದಂ ಸೇತುವೆ) ಬಳಿ ನಡೆದ ರಾಲಿಯ ವೇಳೆ ಉಮಾ ಭಾರತಿಯವರು ಕೋಮು ದ್ವೇಷ ಬಿತ್ತುವ ಹೇಳಿಕೆಗಳನ್ನು ತಮ್ಮ ಭಾಷಣದಲ್ಲಿ ನೀಡಿರುವುದಾಗಿ ಪೊಲೀಸರು ದಾಖಲಿಸಿರುವ ಪ್ರಾಥಮಿಕ ತನಿಖಾ ವರದಿ (ಎಫ್ಐಆರ್)ನಲ್ಲಿ ತಿಳಿಸಿದ್ದಾರೆ.
ಭಾರತೀಯ ದಂಡಸಂಹಿತೆ 153ಎ ಕಲಂ ಅನ್ವಯ ಉಮಾ ಭಾರತಿಯವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಧಾರ್ಮಿಕ ಸಂಘಟನೆಗಳ ಮಧ್ಯೆ ಶತ್ರುತ್ವ ಬೆಳೆಸುವ ಸಂಚು ಹೊಂದಿದ್ದಾರೆ ಎಂಬುದು ಆರೋಪದ ಸಾರಾಂಶ.
|