ಗುಜರಾತ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ, ನೆರೆಹಾವಳಿ ಹೆಚ್ಚಿದೆ. ರಾಜ್ಯದ 80 ಗ್ರಾಮಗಳಲ್ಲಿ ತುರ್ತುಸ್ಥಿತಿ ಘೋಷಿಸಲಾಗಿದೆ. ಬರೂಚಾ, ವಡೋದರಾ ಹಾಗೂ ಅಹ್ಮದಾಬಾದ್ ಜಿಲ್ಲೆಗಳಲ್ಲಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.
ವಡೋದರಾ ಹಾಗೂ ಬರೂಚ್ ಜಿಲ್ಲೆಗಳಲ್ಲಿ ನರ್ಮದಾ ನದಿಯ ಕೆಳಹರಿವಿನ ಪ್ರದೇಶಗಳಲ್ಲಿರುವ 72 ಗ್ರಾಮಗಳನ್ನು ತೆರವು ಗೊಳಿಸಲಾಗಿದೆ. ಭಾರೀ ಮಳೆ ಹಾಗೂ ಪ್ರವಾಹ ಭೀತಿಯಿಂದಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಸ್ಥಳೀಯರ ಹೇಳಿಕೆ ಪ್ರಕಾರ ಸರ್ದಾರ್ ಸರೋವರ್ ಕಾಮಗಾರಿಯಿಂದಾಗಿ ಪ್ರದೇಶಗಳಲ್ಲಿ ಎರಡನೇ ಬಾರಿ ಪ್ರವಾಹ ಹಾಗೂ ನೆರೆ ಹಾವಳಿ ಸಂಭವಿಸಿದೆ ಎಂಬ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 1.5 ಲಕ್ಷ ಕ್ಯೂಸೆಕ್ಸ್ ನೀರಿ ಅಣೆಕಟ್ಟಿನ್ನು ಮೀರಿ ಹೊರ ಚೆಲ್ಲ್ಲುತ್ತಿರುವುದಾಗಿ ಸ್ಥಳೀಯ ಮಾಹಿತಿ ತಿಳಿಸಿದೆ.
ಬರೂಚಾ ಜಿಲ್ಲೆಯಿಂದ 44,000 ಜನರನ್ನು ಕಳೆದ ವಾರ ಸರ್ದಾರ್ ಸರೋವರ ಪ್ರದೇಶದಿಂದ ಸುರಕ್ಷಿತ ಸ್ಥಾನಗಳಿಗೆ ಸ್ಥಳಾಂತರಿಸಲಾಗಿತ್ತು. ಅಣೆಕಟ್ಟು ಮಳೆ ಹಾಗೂ ಪ್ರವಾಹದಿಂದ ತುಂಬಿಹೊರಚೆಲ್ಲಿದ ಕಾರಣ ಅಪಾಯಕಾರಿ ಹಂತ ತಲುಪಿತ್ತು.
ಇದೀಗ ಮಳೆ, ನೆರೆ ಹಾವಳಿಯಿಂದಾಗಿ ಅಹ್ಮದಾಬಾದ್‌ನ ವಾಟ್ರಾಕ್ ಹಾಗೂ ಮಾಝೂಮ್ ನದಿ ತೀರಗಳಲ್ಲಿರುವ 14 ಗ್ರಾಮ ವಾಸಿಗಳನ್ನೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
|