ಯುರೋಪ್‌ನಿಂದಾಚೆ ಮೊದಲ ಬಾರಿಗೆ ನಡೆಯುತ್ತಿರುವ ನಾಲ್ಕನೆ ಜಾಗತಿಕ ಮಿಲಿಟರಿ ಕ್ರೀಡಾಕೂಟಕ್ಕೆ ಕೇವಲ ನೂರು ದಿನಗಳು ಬಾಕಿ ಇದ್ದು,ನೂರಕ್ಕೂ ಹೆಚ್ಚಿನ ದೇಶಗಳ ಆರು ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ.
ಪ್ರಾನ್ಸ್‌ನ ಕೌನ್ಸಿಲ್ ಫಾರ್ ಇಂಟರನ್ಯಾಷನಲ್ ಮಿಲಿಟರಿ ಸ್ಪೋರ್ಟ್ಸ್ ಆಶ್ರಯದಲ್ಲಿ ನಡೆಯುವ ಬೃಹತ್ ಕ್ರೀಡಾಕೂಟವನ್ನು, ಯುರೋಪಿನಿಂದಾಚೆ ಮೊದಲ ಬಾರಿಗೆ ಭಾರತ ಆಯೋಜಿಸುತ್ತಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ 78 ದೇಶಗಳ, ಐದು ಸಾವಿರ ಕ್ರೀಡಾಪಟುಗಳು ಒಪ್ಪಿಗೆ ಸೂಚಿಸಿದ್ದಾರೆ.ಕ್ರೀಡಾಕೂಟದ ಸಂಘಟಕರು ಕನಿಷ್ಟ ನೂರು ದೇಶಗಳ, ಆರು ಸಾವಿರ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳವುದಕ್ಕೆ ಹೆಸರು ನೊಂದಾಯಿಸಲು ಅಗಸ್ಟ್ 15 ಕೊನೆಯ ದಿನವಾಗಿದೆ,
ಇಂಟರನ್ಯಾಷನಲ್ ಸ್ಪೋರ್ಟ್ಸ್ ಕೌನ್ಸಿಲ್ 128 ಸದಸ್ಯರನ್ನು ಹೊಂದಿದೆ. ಪಾಕಿಸ್ತಾನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುರಿತು ತನ್ನ ಒಪ್ಪಿಗೆಯನ್ನು ಸೂಚಿಸಿಲ್ಲ.
ಪಂದ್ಯಾವಳಿಯಲ್ಲಿ ಒಟ್ಟು 13 ಕ್ರೀಡೆಗಳು ನಡೆಯಲಿವೆ.ಫುಟ್ಬಾಲ್, ವಾಲಿಬಾಲ್, ಸ್ವಿಮ್ಮಿಂಗ್, ಜುಡೊ,ಬಾಕ್ಸಿಂಗ್,ಪ್ಯಾರಾಶೂಟಿಂಗ್,ಮತ್ತು ಟ್ರೈಯಥ್ಲಾನ್ ಮುಂತಾದ ಕ್ರೀಡೆಗಳು ನಡೆಯಲಿವೆ.
ಹಾಕಿ ಮತ್ತು ಕಬಡ್ಡಿ ಆಟಗಳಿಗೆ ತಂಡಗಳ ಕೊರತೆ ಇರುವ ಕಾರಣ ಎರಡು ಆಟಗಳನ್ನು ಪಂದ್ಯಾವಳಿಯಿಂದ ಕೈಬಿಡಲಾಗಿದ್ದು, ಅದರ ಬದಲಿ ಪೋಲೊ ಕ್ರೀಡೆಯನ್ನು ಪರಿಚಯಿಸುವ ಉದ್ದೇಶವನ್ನು ಸಂಘಟಕರು ಹೊಂದಿದ್ದಾರೆ.
ಪೊಲೊ ಪ್ರದರ್ಶನ ಪಂದ್ಯ ಅಕ್ಟೊಬರ್ 19ರಂದು ನಡೆಯಲಿದೆ.
|