ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಕ್ಫ್ ಜಮೀನು ಮಾರಾಟ ಸಲ್ಲ
webdunia
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿರುವ ವಕ್ಫ್ ಬೋರ್ಡ್‌ನ ಸ್ವಾಧೀನ ವಿರುವ ಜಮೀನನ್ನು ಮಾರಾಟಮಾಡುವುದು ಅಥವಾ ವರ್ಗಾಯಿಸುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಕೇಂದ್ರ ವಕ್ಫ್ ಮಂಡಳಿ ತಿಳಿಸಿದೆ.

ಮಹಾರಾಷ್ಟ್ರ ವಕ್ಫ್ ಮಂಡಳಿ ಸ್ವಾಧೀನವಿರುವ ಜಮೀನನ್ನು ವರ್ಗಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ , ಸಾರ್ವತ್ರಿಕ ಅನ್ವಯವಾಗುವಂತೆ ಈ ಆದೇಶವನ್ನು ನೀಡಲಾಗಿದೆ. ಮಹಾರಾಷ್ಟ್ರ ವಕ್ಫ್ ಮಂಡಳಿಯು ಬಹುಮಹಡಿ ವಸತಿ ಸಂಕೀರ್ಣವೊದಗಿಸುವ ಸಂಪನಿಯಾದ ಅಂಟಿಲಾಗೆ ಜಾಗವನ್ನು ಹಸ್ತಾಂತರಿಸಿತ್ತು.

ವಕ್ಫ್ ಜಮೀನನ್ನು ಮಾರಾಟ ಹಾಗೂ ವರ್ಗಾವಣೆ ಮಾಡಲಾಗದು. ಇಂತಹ ಪ್ರಕರಣಗಳು ಕಾನೂನುಬಾಹಿರವಾಗಿರುತ್ತವೆ ಎಂಬುದಾಗಿ ಕೇಂದ್ರ ವಕ್ಫ್ ಮಂಡಳಿ ಕಾರ್ಯದರ್ಶಿ ಎಂ ಆರ್ ಹಕ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಐದುವರ್ಷಗಳ ಹಿಂದೆ 2002ರಲ್ಲಿ ನಡೆದ ಜಮೀನು ಹಸ್ತಾಂತರ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ವಕ್ಫ್ ಅಧ್ಯಕ್ಷ ಎಂ ಎ ಅಜೀಜ್ , ಮುಂಬೈಯ ಮಲಬಾರ್ ಹಿಲ್ಸ್‌ನಲ್ಲಿರುವ 4532 ಚದರ ಮೀಟರ್ ಜಾಗವನ್ನು ಹುರೀಂ ಭಾಯ್ ಅನಾಥಾಶ್ರಮಕ್ಕಾಗಿ ನಿಗದಿತ ಶುಲ್ಕಸಹಿತ ಹಸ್ತಾಂತರಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ವಕ್ಫ್ ಮಂಡಳಿಯು ತನ್ನ ವಶದಲ್ಲಿದ್ ಜಮೀನನ್ನು 16 ಲಕ್ಷ ರೂ. ಗಳಿಗೆ ಅನಾಥಾಶ್ರಮವೊಂದಕ್ಕೆ ವರ್ಗಾಯಿಸಿತ್ತು,. ಅನಾಥಾಶ್ರಮವು ಅದನ್ನು ಅಂಬಾನಿಗೆ ಸಮೂಹಕ್ಕೆ ವರ್ಗಾಯಿಸಿತ್ತು.
ಮತ್ತಷ್ಟು
ಮಿಲಿಟರಿ ಕ್ರೀಡಾಕೂಟಕ್ಕೆ ನೂರು ದಿನ ಬಾಕಿ
ಗುಜರಾತ್-80ಗ್ರಾಮಗಳ ಸ್ಥಳಾಂತರ
ಪ್ರಧಾನಿ6ರಾಜ್ಯಗಳ ಪ್ರವಾಸ
ಉಮಾಭಾರತಿ ವಿರುದ್ಧ ಪ್ರಕರಣ
ಬೆಂಗಳೂರು-ಮನೆಯಲ್ಲಿ ಜೆಹಾದ್ ಸೀಡಿ
ಸಪ್ತ ವಿಸ್ಮಯಗಳಲ್ಲಿ ತಾಜ್‌ಮಹಲ್!