ಭಾರತ ಸಂಚಾರ ನಿಗಮದ ನೌಕರರು ಮೊಬೈಲ್ ಸಂಪರ್ಕವನ್ನು ಹೆಚ್ಚಿಸಲು ಉಪಕರಣಗಳನ್ನು ನೀಡುವಂತೆ ಒತ್ತಾಯಿಸಿ ಅನಿರ್ಧಿಷ್ಠಾವಧಿಯವರೆಗೆ ಮುಷ್ಕರ ಹಮ್ಮಿಕೊಂಡಿರುವುದರಿಂದ ದೂರವಾಣಿ ಸಂಪರ್ಕಗಳಲ್ಲಿ ವ್ಯತ್ಯಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬೆಳಿಗ್ಗೆ 6 ಗಂಟೆಯಿಂದ ಭಾರತ ಸಂಚಾರ ನಿಗಮದ ಎಲ್ಲಾ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಮುಷ್ಕರ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಭಾರತ ಸಂಚಾರ ನಿಗಮ ಮತ್ತು ಎಂಟಿಎನ್‌ಎಲ್ ನಿಗಮದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಮತ್ತು ದೆಹಲಿಯನ್ನು ಹೊರತುಪಡಿಸಿ ಬಿಎಸ್‌ಎನ್‌ಎಲ್ 3.5 ಕೋಟಿ ಸ್ಥಿರ ದೂರವಾಣಿ ಹಾಗೂ 2.4 ಕೋಟಿ ಮೊಬೈಲ್ ಸಂಪರ್ಕಗಳಿವೆ ಎಂದು ಹೇಳಿದ್ದಾರೆ.
ದೂರವಾಣಿ ಇಲಾಖೆ ಹಾಗೂ ಸಂಪರ್ಕ ಖಾತೆ ಸಚಿವ ಎ.ರಾಜಾ ಮತ್ತು ಕಂಪೆನಿಯ ಅಡಳಿತ ಮಂಡಳಿ ಮಧ್ಯೆ ನಡೆದ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಮುಷ್ಕರ ನಡೆಸಬೇಕಾಯಿತು ಎಂದು ಮುಷ್ಕರ ನಿರತರು ಹೇಳಿದ್ದಾರೆ.
ಬಿಎಸ್‌ಎನ್‌ಎಲ್ ಸೇರಿದಂತೆ ಇನ್ನಿತರ ಸಂಘಟನೆಗಳು 45.5 ಮಿಲಿಯನ್ ಸಂಪರ್ಕಗಳನ್ನು ಒದಗಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದ್ದರು, ತೃಪ್ತರಾಗದ ನೌಕರರ ಸಂಘಟನೆಯ ಪದಾಧಿಕಾರಿಗಳು ದೂರವಾಣಿ ಸಂಪರ್ಕ ಇಲಾಖೆಯ ಕಾರ್ಯದರ್ಶಿ, ಕೇಂದ್ರ ಸಂಪರ್ಕ ಖಾತೆ ಸಚಿವ ಎ.ರಾಜಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
|