ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಸ್ಸಾಂ: ಎಫ್‌ಸಿಐ ನಿರ್ದೇಶಕ ಸಾವು ಶಂಕೆ
ಅಸ್ಸಾಂನ ಕಾಮರೂಪ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಳವಾರ ರಾತ್ರಿ ಉಲ್ಫಾ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ, ಎಫ್‌ಸಿಐ ಕಾರ್ಯಕಾರಿ ನಿರ್ದೇಶಕ ಪಿ.ಸಿ.ರಾಮ್ ಎಂದು ಹೇಳಲಾಗುತ್ತಿರುವ ವ್ಯಕ್ತಿ ಹಾಗೂ ಇಬ್ಬರು ಉಲ್ಫಾ ಉಗ್ರಗಾಮಿಗಳು ಮೃತಪಟ್ಟಿದ್ದಾರೆ.

ಗೋವಿಂದ ದೇಕಾ ಎಂಬಾತನ ಮನೆಯಲ್ಲಿ ಉಲ್ಫಾ ಉಗ್ರರು ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿ ದೊರೆತ ಪೊಲೀಸರು, ಮಂಗಳವಾರ ರಾತ್ರಿಯೇ ಅಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು ಎಂದು ಅಸ್ಸಾಂ ಡಿಐಜಿ ಜಿ.ಪಿ.ಸಿಂಗ್ ತಿಳಿಸಿದ್ದಾರೆ.

ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸರು ಈ ಮನೆಯನ್ನು ಸುತ್ತುವರಿದಿದ್ದರು. ಈ ಸಂದರ್ಭ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾದರು. ಇದೇ ಸಂದರ್ಭ ಗುಂಡಿನ ದಾಳಿಯಿಂದ ಛಿದ್ರಗೊಂಡ ಸುಮಾರು 45ರ ಹರೆಯದ ವ್ಯಕ್ತಿಯೊಬ್ಬರ ಮೃತದೇಹ ದೊರೆತಿದ್ದು, ಅದು ಪಿ.ಸಿ.ರಾಮ್ ಅವರದು ಎಂದು ಅಂದಾಜಿಸಲಾಗಿದೆ. ದೇಹ ಚಹರೆಯು ಪಿ.ಸಿ.ರಾಮ್ ಅವರನ್ನೇ ಹೋಲುತ್ತಿದೆಯಾದರೂ, ಅದು ಅವರದ್ದೇ ಎಂದು ಖಚಿತಪಡಿಸಲು ಸಾಧ್ಯವಾಗಿಲ್ಲ. ರಾಮ್ ಕುಟುಂಬಿಕರನ್ನು ಇಲ್ಲಿಗೆ ಬಂದು ದೇಹವನ್ನು ಗುರುತಿಸುವಂತೆ ನಾವು ಕೋರಿದ್ದೇವೆ ಎಂದು ಡಿಜಿಪಿ ತಿಳಿಸಿದ್ದಾರೆ.

ಆ ಪ್ರದೇಶದಿಂದ ಪೊಲೀಸರು ಎಕೆ-56 ರೈಫಲ್‌ಗಳು, ಪಿಸ್ತೂಲ್, ಗ್ರೆನೇಡ್, ಐಇಡಿ ಮತ್ತು ಇತರ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು
ಬಿಎಸ್‌ಎನ್‌ಎಲ್ ನೌಕರರ ಮುಷ್ಕರ:ಸಂಪರ್ಕ ವ್ಯತ್ಯಯ
ರೈಲುಸ್ಫೋಟಕ್ಕೆ 1 ವರ್ಷ-ಭಯಬಿಡದ ದುಃಸ್ವಪ್ನ
ವಕ್ಫ್ ಜಮೀನು ಮಾರಾಟ ಸಲ್ಲ
ಮಿಲಿಟರಿ ಕ್ರೀಡಾಕೂಟಕ್ಕೆ ನೂರು ದಿನ ಬಾಕಿ
ಗುಜರಾತ್-80ಗ್ರಾಮಗಳ ಸ್ಥಳಾಂತರ
ಪ್ರಧಾನಿ6ರಾಜ್ಯಗಳ ಪ್ರವಾಸ