ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಪರಾಷ್ಟ್ರಪತಿಗೆ ಜನಮನ್ನಣೆ ಅಗತ್ಯ : ಕಾರಟ್
ಉಪರಾಷ್ಟ್ರಪತಿ ಚುನಾವಣೆಗೆ ಭಿನ್ನ ಧೋರಣೆ ಅಳವಡಿಸಿಕೊಂಡಿರುವ ಸಿಪಿಐ(ಎಂ), ಆಗಸ್ಟ್ 10ರ ಚುನಾವಣೆಗೆ ಆಡಳಿತ ಯುಪಿಎಯ ಅಭ್ಯರ್ಥಿಯು ರಾಜಕೀಯ ಹಿನ್ನೆಲೆಯುಳ್ಳವರಾಗಬೇಕಿಲ್ಲ ಜನಮನ್ನಣೆ ಇರಬೇಕು ಎಂದು ಗುರುವಾರ ಹೇಳಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಉಪರಾಷ್ಟ್ರಪತಿಯು "ಯಾವುದಾದರೂ ಒಂದು ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದಂತಹವರಾಗಿರಬೇಕು ಹಾಗೂ ಜನಮನ್ನಣೆಯನ್ನು ಹೊಂದಿರಬೇಕು" ಎಂದು ಹೇಳಿದ್ದಾರೆ.

ನಮ್ಮ ಪ್ರಕಾರ, ಅದು ಯಾರಾದರೂ ಆಗಿರಬಹುದು. ಆದರೆ, ಸಾಧನೆ ಮಾಡಿದವರಾಗಿರಬೇಕು. ಅದೇ ಉಪರಾಷ್ಟ್ರಪತಿಯ ಪಾತ್ರ. ಅವರು ನೀತಿ ನಿಯಮಗಳನ್ನು ಮಾಡಬೇಕಾಗಿಲ್ಲ. ಅವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಬಹುದು ಎಂದು ಕಾರಟ್ ಹೇಳಿದರು.

ರಾಷ್ಟ್ರಪತಿ ಚುನಾವಣೆಗೆ ಹೋಲಿಸಿದಲ್ಲಿ ತಮ್ಮ ಪಕ್ಷ ಉಪರಾಷ್ಟ್ರಪತಿ ಚುನಾವಣೆಗೆ ಭಿನ್ನ ನಿಲುವನ್ನು ಅಳವಡಿಸಿಕೊಳ್ಳಲಿದೆ ಎಂದು ಅವರು ನುಡಿದರು.

ತೃತೀಯ ಪರ್ಯಾದ ಕುರಿತು ಮಾತನಾಡಿದ ಕಾರಟ್, ನಮ್ಮ ಪಕ್ಷವು ಕಳೆದ ಎರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಆ ಮೂರನೇ ಪರ್ಯಾಯವು ಕಾಂಗ್ರೆಸ್‌ನ್ನು ಒಳಗೊಂಡಿರುವುದಿಲ್ಲ. ಅದು ಕಾಂಗ್ರೆಸ್ಸೇತರ, ಬಿಜೆಪಿಯೇತರ. ಪರ್ಯಾಯವು ಕೆಲವು ತತ್ವಗಳನ್ನು ಆಧರಿಸಿರುತ್ತದೆ.

ಕಾಂಗ್ರೆಸ್ ಅಲ್ಲಿರುವುದಾದಲ್ಲಿ, ಸಿಪಿಐ(ಎಂ) ಅಂತಹ ಮೈತ್ರಿಯನ್ನು ಸೇರಲಿದೆಯೇ ಎಂದು ಪ್ರಶ್ನಿಸಿದಾಗ, ಸಿಪಿಐ(ಎಂ) ಮತ್ತು ಕಾಂಗ್ರೆಸ್, ನೀತಿಗಳ ವಿಷಯವಾಗಿ ಭಿನ್ನಾಭಿಪ್ರಾಯಗಳನ್ನು ಹೊಂದಿದೆ ಎಂದು ಹೇಳಿದರು.

ತೃತೀಯ ಪರ್ಯಾಯವು ಕೋಮುವಾದದ ವಿರುದ್ಧದ ಶಕ್ತಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮತ್ತಷ್ಟು
ಅಸ್ಸಾಂ: ಎಫ್‌ಸಿಐ ನಿರ್ದೇಶಕ ಸಾವು ಶಂಕೆ
ಬಿಎಸ್‌ಎನ್‌ಎಲ್ ನೌಕರರ ಮುಷ್ಕರ:ಸಂಪರ್ಕ ವ್ಯತ್ಯಯ
ರೈಲುಸ್ಫೋಟಕ್ಕೆ 1 ವರ್ಷ-ಭಯಬಿಡದ ದುಃಸ್ವಪ್ನ
ವಕ್ಫ್ ಜಮೀನು ಮಾರಾಟ ಸಲ್ಲ
ಮಿಲಿಟರಿ ಕ್ರೀಡಾಕೂಟಕ್ಕೆ ನೂರು ದಿನ ಬಾಕಿ
ಗುಜರಾತ್-80ಗ್ರಾಮಗಳ ಸ್ಥಳಾಂತರ