ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಾರೀ ಜನಸ್ತೋಮ, ಅಮರ್‌ನಾಥ್ ಯಾತ್ರೆಗೆ ತಡೆ
ಭಾರೀ ಸಂಖ್ಯೆಯ ಯಾತ್ರಾರ್ಥಿಗಳು ಹಾಗೂ ಜಟಿಲ ಹವಾಮಾನದಿಂದಾಗಿ ದಕ್ಷಿಣ ಕಾಶ್ಮೀರ ಹಿಮಾಲಯಗಳಲ್ಲಿನ ಅಮರ್‌ನಾಥ್ ಗುಹಾಂತರ ದೇವಾಲಯಕ್ಕೆ ಯಾತ್ರಿಕರು ಭೇಟಿ ನೀಡುವುದನ್ನು ಗುರುವಾರ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ವಾಹನ ಸಂಚಾರಕ್ಕೆ ಮುಕ್ತವಾಗಿದ್ದರೂ, ಪಹಲ್ಗಾಮ್ ಮತ್ತು ಬಲ್ತಲ್‌ನ ನೆಲೆಶಿಬಿರಗಳಲ್ಲಿ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ನೆರೆದಿರುವುದರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಯಾತ್ರಾರ್ಥಿಗಳ ಈ ದಟ್ಟ ಸಂದಣಿ ಗುಹಾಂತರ ದೇವಾಲಯಕ್ಕೆ ಸುಗಮ ಯಾತ್ರೆಗೆ ಅನುಮತಿ ನೀಡಲು ಸಮಸ್ಯೆಗಳನ್ನು ಒಡ್ಡಬಹುದಾದ್ದರಿಂದ, ಅದಲ್ಲದೆ ಬಲ್ತಲ್ ಮತ್ತು ಪಹಲ್ಗಾಮ್ ಪ್ರದೇಶಗಳಲ್ಲಿ ಮೋಡಕವಿದ ವಾತಾವರಣವಿರುವುದನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಯಾತ್ರೆಯು ಶುಕ್ರವಾರದಂದು ಜಮ್ಮುವಿನ ಎಂಎಎಂ ಕ್ರೀಡಾಂಗಣದ ನೆಲೆಶಿಬಿರದಿಂದ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 30ರಂದು ಆರಂಭಗೊಳ್ಳಬೇಕಿದ್ದ ವಾರ್ಷಿಕ ಅಮರ್‌ನಾಥ್ ಯಾತ್ರೆಯನ್ನು ಭಾರೀ ಮಳೆಯಿಂದಾಗಿ ಉಂಟಾಗಿದ್ದ ಭೂಕುಸಿತದಿಂದಾಗಿ ಎರಡು ದಿನ ತಡವಾಯಿತು.

ಅಧಿಕೃತ ಆರಂಭ ಜುಲೈ 2 ಆಗಿರುವುದರಿಂದ, ಲಕ್ಷಕ್ಕಿಂತಲೂ ಅಧಿಕ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆಂದು ಶ್ರೀ ಅಮರ್‌ನಾಥ್ ದೇವಾಲಯ ಮಂಡಳಿ ನಿರ್ದೇಶಕರಾದ ಮದನ್ ಮಂಟೂ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ನಕ್ಸಲೀಯರಿಂದ ಸ್ಪೋಟಕ ಬಳಕೆ: ಧ್ವಂಸ
ಉಪರಾಷ್ಟ್ರಪತಿಗೆ ಜನಮನ್ನಣೆ ಅಗತ್ಯ : ಕಾರಟ್
ಅಸ್ಸಾಂ: ಎಫ್‌ಸಿಐ ನಿರ್ದೇಶಕ ಸಾವು ಶಂಕೆ
ಬಿಎಸ್‌ಎನ್‌ಎಲ್ ನೌಕರರ ಮುಷ್ಕರ:ಸಂಪರ್ಕ ವ್ಯತ್ಯಯ
ರೈಲುಸ್ಫೋಟಕ್ಕೆ 1 ವರ್ಷ-ಭಯಬಿಡದ ದುಃಸ್ವಪ್ನ
ವಕ್ಫ್ ಜಮೀನು ಮಾರಾಟ ಸಲ್ಲ