ರಾಷ್ಟ್ರಪತಿ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಎನ್‌ಡಿಎ ನಾಯಕರ ದೂರವಾಣಿಯನ್ನು ಕದ್ದಾಲಿಸುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವ ಭೈರೋನ್ ಸಿಂಗ್ ಶೆಖಾವತ್ ವಕ್ತಾರರಾಗಿರುವ ಸುಷ್ಮಾ ಸ್ವರಾಜ್ ಅವರು ಈ ಬಗ್ಗೆ ಎನ್‌ಡಿಎ ಎಂಟಿಎನ್‌ಎಲ್ ಮುಖ್ಯಸ್ಥರಿಗೆ ಹಾಗೂ ದೂರ ಸಂಪರ್ಕ್ ಸಚಿವಾಲಯಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಕುರಿತು ತಮಗೆ ಸಚಿವಾಲಯದಿಂದ ನಿರಾಕರಣೆಯ ಉತ್ತರ ಬರುತ್ತದೆ ಎಂಬುದೂ ತಿಳಿದಿದೆ ಎಂದು ಹೇಳಿದರು.
ಇದೇ ರೀತಿಯ ಆರೋಪ ಮಾಡಿರುವ ಬಿಜೆಪಿ ಸಂಸದ ಎಸ್.ಎಸ್.ಅಹ್ಲುವಾಲಿಯಾ ಮತ್ತು ಜನತಾದಳ(ಯು)ಸಂಸದ ದಿಗ್ವಿಜಯ್ ಸಿಂಗ್ ಅವರು ರಾಷ್ಟ್ರಪದ ಹಿತಾಸಕ್ತಿಗಾಗಿ ದೂರವಾಣಿ ಕದ್ದಾಲಿಕೆ ಮಾಡಬಹುದೇ ಹೊರತು ರಾಜಕೀಯ ಪ್ರತಿಸ್ಪರ್ಧೆಯ ಕಾರಣಗಳಿಗಲ್ಲ ಎಂದು ಹೇಳಿದ್ದಾರೆ.
ನನ್ನ ಸೆಲ್ ಪೋನ್‌ನಿಂದ ಮನೆಗೆ ಕರೆ ಮಾಡಿದರೆ ಅದು ನೇರ ಪೊಲೀಸ್ ಕಂಟ್ರೋಲ್ ರೂಂಗೆ ಹೋಗುತ್ತದೆ.ನನ್ನ ಮನೆಗೂ ಪೊಲೀಸ್ ಕಂಟ್ರೋಲ್ ರೂಂಗೂ ಏನು ಸಂಬಂಧ ಎಂದು ಸುಷ್ಮಾ ಕಟುವಾಗಿ ಪ್ರಶ್ನಿಸಿದ್ದಾರೆ.
|