ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಯೋತ್ಪಾದಕರಿಗೆ ಶಿಕ್ಷೆಯಾಗದೆ ವಿಶ್ರಾಂತಿಯಿಲ್ಲ
ಕಳೆದ ವರ್ಷ ನೂರಾರು ಮಂದಿಯ ಸಾವಿಗೆ ಕಾರಣವಾದ ಮುಂಬೈ ರೈಲುಗಾಡಿಯಲ್ಲಿನ ಸರಣಿ ಸ್ಫೋಟಪ್ರಕರಣದ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವ ವರೆಗೆ ಸರ್ಕಾರಕ್ಕೆ ವಿಶ್ರಾಂತಿ ಇಲ್ಲ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಗಂಭೀರ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದೇ ಸ್ಥಿತಿಯಲ್ಲಿ ತನಿಖೆ ಸಾಗಿದೆ ಈ ಕಾರಣದಿಂದ ಸ್ಫೋಟಪ್ರಕರಣದ ತನಿಖೆಯ ಕುರಿತು ಗುಮಾನಿಬೇಡವೆಂಬುದು ಸಿಂಗ್ ಹೇಳಿಕೆಯ ತಾತ್ಪರ್ಯ.

ಪ್ರಕರಣದಲ್ಲಿ ಯಾರವಿರುದ್ಧ ಪ್ರಕರಣದಾಖಲಾಗಿದೆಯೋ, ಯಾರೆಲ್ಲಾ ಇನ್ನೂ ತಲೆಮರೆಸಿಕೊಂಡು ಬೇಕಾಗಿದ್ದಾರೋ ಅವರೆಲ್ಲರನ್ನೂ ಕಾನೂನಿನ ಮುಂದೆ ಶರಣಾಗಿಸಿ ಅರ್ಹ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸರಣಿ ಬಾಂಬ್ ಸ್ಫೋಟ ದುರಂತದ ವರ್ಷಾಚರಣೆಯ ಮರುದಿನ ನೀಡಿದ ಹೇಳಿಕೆಯಲ್ಲಿ ಖಚಿತ ಪಡಿಸಿದ್ದಾರೆ.

ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುವಲ್ಲಿ ಮುಂಬೈ ಜನರ ಸಹಕಾರ ಬೆಂಬಲ ಸರ್ಕಾರಕ್ಕೆ ಬೇಕಾಗಿದೆ ಎಂದಿರುವ ಸಿಂಗ್, ಎತಹ ಸಂಕಷ್ಟದ ಸ್ಥಿತಿಯಲ್ಲೂ ಮನಸ್ಥೈರ್ಯ ಉಳಿಸಿಕೊಂಡಿರುವ ಜನರನ್ನು ಶ್ಲಾಘಿಸಿದ್ದಾರೆ.

ಮುಂಬೈಪ್ರಸ್ತುತ ದುರಂತದಲ್ಲಿ 187 ಮಂದಿ ಸಾವನ್ನಪ್ಪಿ,812 ಮಂದಿ ಗಂಭೀರ ಗಾಯಗೊಂಡಿದ್ದರು.
ಮತ್ತಷ್ಟು
ಮಕ್ಕಳಿಗೆ ಕುದುರೆ ಕೊಟ್ಟ ಡಾ.ಕಲಾಂ
ಯುಪಿಎನಿಂದ ಫೋನ್ ಕರೆ ಕದ್ದಾಲಿಕೆ -ಸುಷ್ಮಾ ಸ್ವರಾಜ್
ರಾಷ್ಟ್ರಪತಿ ಕಲಾಂರಿಗೆ ಕಿಂಗ್ ಚಾರ್ಲ್ಸ್ II ಪದಕದ ಗೌರವ
ಭಾರೀ ಜನಸ್ತೋಮ, ಅಮರ್‌ನಾಥ್ ಯಾತ್ರೆಗೆ ತಡೆ
ನಕ್ಸಲೀಯರಿಂದ ಸ್ಪೋಟಕ ಬಳಕೆ: ಧ್ವಂಸ
ಉಪರಾಷ್ಟ್ರಪತಿಗೆ ಜನಮನ್ನಣೆ ಅಗತ್ಯ : ಕಾರಟ್