ಮಹಿಳೆಯರಿಂಗ ಕೆಲಕಾಲದಿಂದ ದೌರ್ಜನ್ಯ, ಕಿರುಕುಳ ನೀಡುತ್ತಿದ್ದ ಸ್ಥಳೀಯ ಪುಡಿರೌಡಿಯೊಬ್ಬನನ್ನು ಮಹಿಳಾ ಮಣಿಗಳೇ ಸೇರಿ ಮಾರಕ ಹಲ್ಲೆ ನಡೆಸಿ,'ಒಲಿದರೆ ನಾರಿ ಮುನಿದರೆ ಮಾರಿ' ಎಂಬ ಮಾತಿಗೆ ಅರ್ಥನೀಡಿದ್ದಾರೆ.
ನಾಗ್ಪುರದ ಚಂದನ್‌ನಗರ ನಿವಾಸಿಗಳಾದ ಮಹಿಳೆಯರು ಹೀಗೊಂದು ವಿಧಾನದಿಂದ ತಮ್ಮ ತಮ್ಮ ಸಮಸ್ಯೆ ತಾವೇ ಪರಿಸುವ 'ಸ್ವ-ಸಹಾಯ'ಪದ್ಧತಿಯನ್ನು ಜಾರಿಗೊಳಿಸಿದರು. ಪೊಲೀಸ್ ನೆರವಿಗೆ ಕಾಯುವ ಬದಲು ಕಿರುಕುಳ ನೀಡುತ್ತಿದ್ದವನಿಗೆ ಮಾರಕ ಹಲ್ಲೆ ನಡೆಸಿದ್ದಾರೆ.
ಮಹಿಳೆಯರ ಕಲ್ಲು-ಇಟ್ಟಿಗೆ, ಲಟ್ಟಣಿಗೆ ಏಟಿನಿಂದ ಜರ್ಜರಿತನಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಆರೋಪಿಯನ್ನು ನರೇಶ್ ಮೆಶ್ರಾಂ ಎಂದು ಗುರುತಿಸಲಾಗಿದೆ. ಈತ ಈ ಮೊದಲು ಹಲವಾರು ಅಪರಾಧ ಕೃತ್ಯಗಳನ್ನು ನಡೆಸಿದವನಾಗಿದ್ದಾನೆ.
ನರೇಶ್‌ನ ಕಿರುಕುಳ, ಶೋಷಣೆ ದೌರ್ಜನ್ಯಗಳನ್ನು ಸಹಿಸಲಾರದೆ ಈ ಕೃತ್ಯವನ್ನು ಮಹಿಳೆಯರೆಲ್ಲ ಜೊತೆಗೂಡಿ ನಿರ್ವಹಿಸಿದ್ದಾರೆ. ಎಷ್ಟು ಕಾಲವೆಂದು ಆತನನ್ನು ಸಹಿಸಲಿ, ಕೊನೆಗೆ ನಾವೇ ನಿರ್ಧರಿಸಿ, ಕೋಲು, ಕಲ್ಲು, ಕೈಗೆ ಸಿಕ್ಕ ಆಯುದದಲ್ಲಿ ಚಚ್ಚಿರುವುದಾಗಿ ಮಹಿಳಾ ಗುಂಪಿನಲ್ಲಿದ್ದ ಪುಷ್ಪಾ ಬಾವ್ನೆ ಹೇಳುತ್ತಾರೆ.
ಆರೋಪಿ ನರೇಶ್ ವಿರುದ್ಧ ಅತ್ಯಾಚಾರ ಪ್ರಕರಣವೂ ಇದೆ. ಈತ ಮಹಿಳೆಯರನ್ನೇ ಹೆಚ್ಚಾಗಿ ಪೀಡಿಸುತ್ತಿದ್ದು, ತನ್ನ ಅನುಯಾಯಿಗಳೊಂದಿಗೆ ಮನೆಗೆ ನುಗ್ಗಿ ಚಾಕು ತೋರಿಸಿ ಮನಬಂದಂತೆ ವರ್ತಿಸುತ್ತಿದ್ದನು. ಚುಡಾವಣೆ, ಬೆನ್ನಟ್ಟುವಿಕೆ, ಅಶ್ಲೀಲತೆ ಇತ್ಯಾದಿ ಮಹಿಳೆಯರು ನೀಡುವ ದೂರು ಅನೇಕ.
ಆಸ್ಪತ್ರೆಯಲ್ಲಿ ಆತನನ್ನು ಬದುಕಲು ಬಿಡಬೇಡಿ ಕೊಂದು ಹಾಕಿ, ಆತ ಬದುಕುಳಿದರೆ ನಮ್ಮನ್ನೆಲ್ಲಾ ಕೊಂದು ಹಾಕುತ್ತಾನೆ ಎನ್ನುತ್ತಾರೆ ನೊಂದ ಮಹಿಳೆಯರು.
|