ಮಳೆಯಿಂದಾದ ಪ್ರವಾಹ ಅಸ್ಸಾಮ್ ರಾಜ್ಯದ ನದಿಗಳು ನೆರೆನೀರಿನಿಂದ ತುಂಬಿ ತುಳುಕುವಂತೆ ಮಾಡಿದ್ದು, ಸುಮಾರು 40,000 ಮಂದಿ ಮನೆಕಳಕೊಂಡಿದ್ದು,120 ಗ್ರಾಮಗಳು ನಾಶವಾಗಿವೆ.
ತನ್ಮಧ್ಯೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರಿಗೆ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಿ ಆಹಾರದ ಪೊಟ್ಟಣಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.
ರಾಜ್ಯದ ಪೂರ್ವ ವಿಭಾಗದ ಜಿಲ್ಲೆಯಾದ ಧೆಮಾಜಿಯಲ್ಲಿ 120ರಷ್ಟು ಗ್ರಾಮಗಳು ನೀರಲ್ಲಿ ಮುಳುಗಿ ಭಾರೀ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಪ್ರಸ್ತುತ ಸಂತ್ರಸ್ತ ಪ್ರದೇಶವು ಗುವಹಾಟಿಯಿಂದ 500 ಕಿ.ಮೀ. ದೂರದಲ್ಲಿದೆ.
ಸಂತ್ರಸ್ತ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿರುವುದಾಗಿ ಹೇಳವರಾಗುತ್ತಿದೆ. ಪ್ರಕೃತಿ ವಿಕೋಪ ಪರಿಹಾರ ತಂಡಕ್ಕೆ ಇದನ್ನೆಲ್ಲಾ ನಿರ್ವಹಿಸುವುದು ಕಷ್ಟವಾಗಿದೆ. ಕಳೆದ 8 ತಾಸುಗಳ ಅವಧಿಯಲ್ಲಿ ಸುಮಾರು 30,000 ಮಂದಿಯನ್ನು ಸ್ಥಳಾಂತರಿಸಲಾಗಿದೆ, ಇದೊಂದು ಭಗೀರಥಪ್ರಯತ್ನ ಎಂಬುದಾಗಿ ಜಿಲ್ಲಾಧಿಕಾರಿ ಡಿ ಎನ್ ಮಿಶ್ರಾತಿಳಿಸಿದ್ದಾರೆ
|