ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹನೀಫ್ ಆರೋಪಿ-ಜಾಮೀನು ಅರ್ಜಿ
ಬ್ರಿಟನ್‌ನ ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟ ಸಂಚಿನಲ್ಲಿ ಭಾರತೀಯ ವೈದ್ಯ ಮಹಮ್ಮದ್ ಹನೀಫ್ ಆರೋಪಿಯಲ್ ಎಂಬುದಾಗಿ ಕಳೆದ ದಿನವಷ್ಟೇ ಹೇಳಿದ್ದ ಆಸ್ಟ್ರೇಲಿಯಾ ಪೊಲೀಸರು ಇದೀಗ ಆತನ ವಿರುದ್ಧ ಆರೋಪ ಪ್ರಕರಣ ದಾಖಲಿಸಿದ್ದಾರೆ.

ಹೊಸದಾಗಿ ಲಭಿಸಿರುವ ಮಾಹಿತಿಯಂತೆ ಹನೀಫ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುತ್ತಿದೆ. ಭಯೋತ್ಪಾದಕರಿಗೆ ಅಧಿಕೃತ ಮೊಬೈಲ್ ಸಿಮ್‌ಕಾರ್ಡ್ ಪೂರೈಸಿರುವುದಕ್ಕಾಗಿ ಪ್ರಕರಣ ದಾಖಲಾಗಿದೆ.

ಜಾಮೀನು ಅರ್ಜಿ: ಆರೋಪ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮೊಹಮ್ಮದ್ ಹನೀಫ್‌ನ್ನು ಇಂದು ಸಂಜೆಯೊಳಗಾಗಿ ಆಸ್ಟ್ರೇಲಿಯಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ.

ಆತನ ವಕೀಲರು ಹೇಳಿರುವಂತೆ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿರುವಂತೆಯೇ, ಆತನ ಬಿಡುಗಡೆಗಾಗಿ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ.

ನ್ಯಾಯಾಲಯ ಆದೇಶ: ಆಸ್ಟ್ಪೇಲಿಯಾ ಉಚ್ಛ ನ್ಯಾಯಾಲವು ತನಿಖಾ ತಂಡದ ಪೊಲೀಸರಿಗೆ 3ದಿನಗಳ ಅವಕಾಶ ನೀಡಿ ಆರೋಪಗಳ ಪುರಾವೆ ಸಂಗ್ರಹಿಸಿ ಪ್ರಕರಣ ದಾಖಲಿಸಿ ಅಥವಾ ಹನೀಫ್‌ನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿರುವ ಬೆನ್ನಲ್ಲೇ ಈ ವಿದ್ಯಮಾನಗಳು ಸಂಭವಿಸಿವೆ.
ಮತ್ತಷ್ಟು
ವಿಶ್ವಸಂಸ್ಥೆ ಅಂಗಣದಲ್ಲಿ ಹಿಂದಿಸಮ್ಮೇಳನ ಆರಂಭ
ಅಸ್ಸಾಂ:120ಗ್ರಾಮಗಳು ನಾಶ
ದೇರಾ ಬಾಬಾ:ಸಿಬಿಐ ತನಿಖೆ
ಸ್ತ್ರೀಪೀಡಕನಿಗೆ 'ಬುದ್ಧಿಕಲಿಸಿದ' ನಾರಿಯರು
ಭಯೋತ್ಪಾದಕರಿಗೆ ಶಿಕ್ಷೆಯಾಗದೆ ವಿಶ್ರಾಂತಿಯಿಲ್ಲ
ಮಕ್ಕಳಿಗೆ ಕುದುರೆ ಕೊಟ್ಟ ಡಾ.ಕಲಾಂ