ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿಶ್ವ ಹಿಂದಿಸಮ್ಮೇಳನ- ಕಿಮೂನ್ ಹಿಂದಿಕುಟುಂಬ
BAN KIMOON
NDND
ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ 8ನೇ ವಿಶ್ವ ಹಿಂದಿ ಸಮ್ಮೇಳನದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೋನ್ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

ಹಿಂದಿ ಸುಂದರ ಭಾಷೆ ಎಂದು ತಿಳಿಸಿದ ಅವರು, ಹಾಗಾಗಿ ಕೊರಿಯ ರಾಯಭಾರ ಕಚೇರಿಯಲ್ಲಿರುವ ಮ್ಯಾಕ್ಸ್‌ಮುಲ್ಲರ್ ಭವನ್‌ನಿಂದ ಈ ಭಾಷೆ ಕಲಿತೆ ಎಂದು ತಿಳಿಸಿದರು.

ನನ್ನ ಮಗ ಭಾರತದಲ್ಲಿ ಜನಿಸಿದವನಾಗಿದ್ದಾನೆ. ನನ್ನ ಮಗಳ ಮದುವೆ ಭಾರತೀಯನೊಂದಿಗೆ ನಡೆದಿದೆ ಎಂದ ಅವರು ನಸುನಗುವಿನೊಂದಿಗೆ, ಇನ್ನೀಗ ಕೊರಿಯಾ ಹಾಗೂ ಭಾರತದ ಜಂಟಿಆಶ್ರಯದ ಉತ್ಪನ್ನ (ಮಗು) ಬರಲಿದೆ ಎಂದು ಸಂಭ್ರಮಿಸಿದರು. ನನ್ನ ಅಳಿಯ ಸುಂದರವಾಗಿ ಹಿಂದಿ ಮಾತನಾಡುವರು ಎಂದರು. ತಮ್ಮ ಕುಟುಂಬಕ್ಕೆ ಹಿಂದಿಯೊಂದಿಗೆ ಮಿಳಿತವಾಗಿರುವುದನ್ನು ವಿವರಿಸಿದರು.

ಸಭಿಕರ ಭಾರೀ ಕರತಾಡನದ ಮಧ್ಯೆ ಕಿ ಮೂನ್ ಹಿಂದಿ ಭಾಷೆಯ ಮಹತ್ವ ತಿಳಿಸಿದರಲ್ಲದೆ, ಸಮಾವೇಶದಲ್ಲಿ ಪಾಲ್ಗೊಂಡ ಐತಿಹಾಸಿಕ ನಿಮಿಷವನ್ನು ದಾಖಲಿಸಿದರು, ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಆನಂತ ಶರ್ಮ ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ಇಂದು: ಇಂದುದೇಶದ ಖ್ಯಾತ ಕವಿ ಅಶೋಕ್ ಚಕ್ರಧರ ಅಧ್ಯಕ್ಷತೆಯಲ್ಲಿ ಜರುಗುವ ಹಿಂದಿ ಸಮ್ಮೇಳನ ಎರಡನೇ ದಿನವಾದ ಇಂದು ವಿಶೇಷ ಸಮಾವೇಶದಲ್ಲಿ ಭಾಷಾ ವಿಶೇಷತೆ ಮತ್ತು ಕ್ರಾಂತಿ ಕುರಿತಾಗಿ ವಿದ್ವಾಂಸರಿಗೆ ಮಾಹಿತಿ ನೀಡಲಾಗುವುದು.

ವೆಬ್‌ ದುನಿಯಾ: ವಿಶ್ವ ಹಿಂದಿ ಸಮ್ಮೇಳನದಲ್ಲಿ, ಪ್ರಪಂಚದ ಮೊತ್ತ ಮೊದಲ ಹಿಂದಿ ಪೋರ್ಟಲ್ ಎಂಬ ಹೆಗ್ಗಳಿಕೆಯ ವೆಬ್‌ದುನಿಯಾ ಪೊರ್ಟಲ್‌ ರಂಗವನ್ನು ಪ್ರತಿನಿಧಿಸುವಂತೆ ಪಾಲ್ಗೊಂಡಿರುವುದ ವಿಶೇಷತೆಯಾಗಿದೆ. ವೆಬ್‌ದುನಿಯಾ ಉಪಾಧ್ಯಕ್ಷ ಪರ್ವಿಂದರ್ ಗುಜ್ರಾಲ್ ಅವರು ಪೋರ್ಟಲ್ ಮತ್ತು ಇದರ ಮೂಲಕ ನಡೆಯುತ್ತಿರುವ ಇತರ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.
ಮತ್ತಷ್ಟು
ಹನೀಫ್ ಆರೋಪಿ-ಜಾಮೀನು ಅರ್ಜಿ
ವಿಶ್ವಸಂಸ್ಥೆ ಅಂಗಣದಲ್ಲಿ ಹಿಂದಿಸಮ್ಮೇಳನ ಆರಂಭ
ಅಸ್ಸಾಂ:120ಗ್ರಾಮಗಳು ನಾಶ
ದೇರಾ ಬಾಬಾ:ಸಿಬಿಐ ತನಿಖೆ
ಸ್ತ್ರೀಪೀಡಕನಿಗೆ 'ಬುದ್ಧಿಕಲಿಸಿದ' ನಾರಿಯರು
ಭಯೋತ್ಪಾದಕರಿಗೆ ಶಿಕ್ಷೆಯಾಗದೆ ವಿಶ್ರಾಂತಿಯಿಲ್ಲ