ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಗ್ರಗಾಮಿತ್ವ ನನ್ನ ರಕ್ತದಲ್ಲಿ ಇಲ್ಲ-ಹನೀಫ್
ಆಸ್ಟ್ರೇಲಿಯನ್ ಪೋಲಿಸ್ ವಶದಲ್ಲಿರುವ ಭಾರತೀಯ ವೈದ್ಯ ಡಾ. ಮೊಹಮ್ಮದ್ ಹನೀಫ್ ತಾನು ಭಯೋತ್ಪಾದಕ ಅಲ್ಲ .ನನ್ನ ರಕ್ತದಲ್ಲಿ ಉಗ್ರಗಾಮಿತ್ವವಿಲ್ಲ ಎಂದು ಅವನ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಮುಂದೆ ಹೇಳಿದ್ದಾನೆ.

ಜುಲೈ 2 ರಿಂದ ಹನ್ನೊಂದು ದಿನಗಳ ಕಾಲ ಪೋಲಿಸ್ ವಶದಲ್ಲಿರುವ ಹನೀಫ್ ಖಿನ್ನತೆಯನ್ನು ಅನುಭವಿಸುತ್ತಿದ್ದಾನೆ ಎಂದು ಹನೀಫ್ ಪರ ವಕೀಲ ಪೀಟರ್ ರೂಸ್ಸೊ ಅವರು ಹೇಳಿದ್ದಾರೆ.

ತನ್ನ ದೀರ್ಘಾವಧಿ ಬಂಧನ ಕುರಿತ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಹನೀಫ್ ಅಳುತ್ತಿದ್ದ ಎಂಬ ವಕೀಲರ ಹೇಳಿಕೆಯನ್ನು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ.

ಪೋಲಿಸರು ಇನ್ನೂ ಮೂರು ದಿನಗಳ ಕಾಲ ಹೆಚ್ಚಿಗೆ 27 ವರ್ಷದ ಹನೀಫ್ ಬಂಧನ ವಿಸ್ತರಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವ ಮುಂಚೆ ಹನೀಫ್ ಪರವಾಗಿ ಕಾನೂನು ತಂಡವೊಂದು ಇಂದು ವಾದ ಮಂಡಿಸಲಿದೆ.

ಇಂದು ನಡೆಯಲಿರುವ ವಿಚಾರಣೆಯಲ್ಲಿ ದೀರ್ಘಾವಧಿಯವರಿಗೆ ಬಂಧನದಲ್ಲಿರಿಸಿಕೊಂಡಿರುವುದರ ಕುರಿತು ನ್ಯಾಯಾಲಯದ ಗಮನ ಸೆಳೆಯಲಾಗುವುದು ಎಂದು ನ್ಯಾಯವಾದಿ ರೊಸ್ಸೊ ಹೇಳಿದ್ದಾರೆ.
ಮತ್ತಷ್ಟು
ಭಯೋತ್ಪಾದನೆ ನಿಗ್ರಹದಲ್ಲಿ ಮೃದುಧೋರಣೆ:ಬಿಜೆಪಿ
ಚುನಾವಣೆ ತ್ಯಜಿಸಲು ತೃತೀಯರಂಗ ನಿರ್ಧಾರ
ವಿಶ್ವ ಹಿಂದಿಸಮ್ಮೇಳನ- ಕಿಮೂನ್ ಹಿಂದಿಕುಟುಂಬ
ಹನೀಫ್ ಆರೋಪಿ-ಜಾಮೀನು ಅರ್ಜಿ
ವಿಶ್ವಸಂಸ್ಥೆ ಅಂಗಣದಲ್ಲಿ ಹಿಂದಿಸಮ್ಮೇಳನ ಆರಂಭ
ಅಸ್ಸಾಂ:120ಗ್ರಾಮಗಳು ನಾಶ