ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಿಯಂತ್ರಣ ರೇಖೆ ಶಾಂತಿ ಸೂಚಕ-ಸಿಂಗ್
ಉಗ್ರಗಾಮಿಗಳ ಆಡುಂಬೊಲ ನೆಲವಾಗಿರುವ ಜಮ್ಮು ಕಾಶ್ಮೀರವು ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸೌಹಾರ್ದದ ಸಂಕೇತವಾಗಬೇಕು, ದೇಶಗಳ ಗಡಿಯಲ್ಲಿರುವ ನಿಯಂತ್ರಣರೇಖೆ(ಎಲ್‌ ಆಫ್ ಕಂಟ್ರೋಲ್)ಯು ಶಾಂತಿ ಸೂಚಕ ರೇಖೆ (ಲೈನ್ ಆಫ್ ಪೀಸ್) ಆಗಲಿ ಎಂದು ಭಾರತದ ಪ್ರಧಾನಿ ಮನಮೋಹನ್‌ ಸಿಂಗ್ ಹಾರೈಸಿದ್ದಾರೆ.

ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಪ್ರಧಾನಿ ಸಿಂಗ್ ಜಮ್ಮು ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದರಲ್ಲದೆ, ಹಾನರೀಸ್ ಕೋಸಾ(ಡಿಗ್ರಿ ಆಫ್ ಡಾಕ್ಟರ್ ಆಫ್ ಲೆಟರ್ಸ್) ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.

ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಕಳೆದ ಆರು ದಶಕಗಳವಧಿಯ ರಕ್ತ ಸಿಕ್ತ ಕರಾಳ ಧಾರವಾಹಿಗೆ ಮುಕ್ತಾಯ ಹಾಡೋಣ, ಭಾರತ ಹಾಗೂ ಪಾಕ್‌ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಶಾಂತಿ ನೆಮ್ಮದಿಯ ಹೊಸ ಅಧ್ಯಾಯ ಆರಂಭಿಸೋಣ ಎಂದು ವಿನಂತಿಸಿದರು.

ಜಮ್ಮುಕಾಶ್ಮೀರ ಕುರಿತಂತೆ ಹೊಸದೊಂದು ವಿಭಜನೆ ಅಥವಾ ಗಡಿಪುನರ್ವಿಮರ್ಶೆ ಇತ್ಯಾದಿಗಳು ಇನ್ನಿಲ್ಲ. ನಾವೀಗ ಮಾಡಬೇಕಾದ ಕೆಲಸವೆಂದರೆ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಿದೆ. ಇದಕ್ಕಾಗಿ ನಿಯಂತ್ರಣ ರೇಖೆಯನ್ನು ಶಾಂತಿಸೂಚಕ ರೇಖೆಯಾಗಿಸೋಣ ಎಂದರು.

ಉಭಯ ರಾಷ್ಟ್ರಗಳ ಗಡಿಯಲ್ಲಿರುವ ನಿಯಂತ್ರಣ ರೇಖೆ (ಎಲ್‌ಒಸಿ) ಇನ್ನು ಪರಸ್ಪರ ಚಿಂತನೆಗಳ ಸಾಗಣೆ, ಸರಕು ಸಾಗಣೆ, ಪರಸ್ಪರಿಗಾಗಿ ಸೇವಾಮನೋಭಾವಕ್ಕಾಗಿ ಬಳಕೆಯಾಗಲಿ ಎಂದು ಶುಭನಿರೀಕ್ಷೆ ವ್ಯಕ್ತಪಡಿಸಿದರು.

ಶಾಂತಿಪಾಲನೆಯಿಂದ ರಾಜ್ಯದಲ್ಲಿ ಭಯೋತ್ಪಾದನೆ, ಗಲಭೆ ಹಿಂಸೆಗಳನ್ನು ಶಾಶ್ವತವಾಗಿ ಕೊನೆಗೊಳಿಸಬೇಕಿದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯು ಮತಪೆಟ್ಟಿಗೆಯಲ್ಲಿದೆಯೇ ವಿನಹ ಬಂದೂಕಿನ ಗುಂಡುಗಳಲ್ಲಲ್ಲ. ಶಾಂತಿಪ್ರಿಯರ ರಾಜ್ಯದಲ್ಲಿ ಭಯೋತ್ಪಾದಕರ ಕುತಂತ್ರವನ್ನು ವಿಫಲಗೊಳಿಸೋಣ ಎಂದವರು ನುಡಿದರು. ಎಂದವರು ಹಿತನುಡಿದರು.
ಮತ್ತಷ್ಟು
ಪುರಿಜಗನ್ನಾಥ:130ನೇ ರಥಯಾತ್ರೆ
ಉಗ್ರಗಾಮಿತ್ವ ನನ್ನ ರಕ್ತದಲ್ಲಿ ಇಲ್ಲ-ಹನೀಫ್
ಭಯೋತ್ಪಾದನೆ ನಿಗ್ರಹದಲ್ಲಿ ಮೃದುಧೋರಣೆ:ಬಿಜೆಪಿ
ಚುನಾವಣೆ ತ್ಯಜಿಸಲು ತೃತೀಯರಂಗ ನಿರ್ಧಾರ
ವಿಶ್ವ ಹಿಂದಿಸಮ್ಮೇಳನ- ಕಿಮೂನ್ ಹಿಂದಿಕುಟುಂಬ
ಹನೀಫ್ ಆರೋಪಿ-ಜಾಮೀನು ಅರ್ಜಿ