ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
'ಉಪರಾಷ್ಟ್ರಪತಿ'-ಎಡರಂಗ ಹುಡುಕಾಟ
ರಾಷ್ಟ್ರಪತಿ ಪದವಿಗಾಗಿ ಚುನಾವಣಾ ಕಣ ಸಿದ್ಧವಾಗಿರುವಂತೆಯೇ, ಇತ್ತ ಉಪರಾಷ್ಟ್ರಪತಿ ಚುನಾವಣಾಕಣ ಬಿಸಿಯೇರತೊಡಗಿದೆ. ತೃತೀಯರಂಗ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಎಡರಂಗ ಸರ್ವಸಮ್ಮತ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ.

ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಬದಿಗಿರಿಸಿ, ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ತೃತೀಯ ರಂಗದ ಯುಎನ್‌ಪಿಎಗಳೆರಡೂ ಒಪ್ಪುವಂತಹ ಒಮ್ಮತದ ವ್ಯಕ್ತಿಯನ್ನು ಸೂಚಿಸಲು ಎಡರಂಗ ಶತಾಯಗತಾಯ ಪ್ರಯತ್ನ ಆರಂಭಿಸಿದೆ.

ಕಳೆದ ದಿನ ರಾಜಧಾನಿಯಲ್ಲಿ ಸಭೆ ಸೇರಿದ ತೃತೀಯ ರಂಗದ ನಾಯಕರು ಉಹರಾಷ್ಟ್ರಪತಿ ಆಯ್ಕೆಗೆ ತಮ್ಮ ಒಕ್ಕೂಟ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಪ್ರಕಟಿಸಿರುವ ಬೆನ್ನಲ್ಲೇ ಎಡರಂಗದ ಹೊಸ ನೀತಿ ಕುತೂಹಲ ಕೆರಳಿಸಿದೆ.

ಉಪರಾಷ್ಟ್ರಪತಿ ಆಯ್ಕೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಯ್ಕೆಯ ಮತದಾನದ ಪಕ್ಷೇತರ ಲಾಭ ಎನ್‌ಡಿಎ ಅಭ್ಯರ್ಥಿಗೆ ಸೇರದಂತೆ ರಕ್ಷಣಾತ್ಮಕ ವಿಧಾನ ಇದಾಗಿರಬಹುದು ಎಂದೂ ಹೇಳಲಾಗುತ್ತಿದೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಎಬಿ ಬರ್ದಾನ್ ತಾನು ಅಭ್ಯರ್ಥಿ ಅಲ್ಲ ಎಂದು ತಿಳಿಸುವ ಮೂಲಕ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ.

ಆಗಸ್ಟ್ 10ರಂದು ಉಪರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.
ಮತ್ತಷ್ಟು
ನಿಯಂತ್ರಣ ರೇಖೆ ಶಾಂತಿ ಸೂಚಕ-ಸಿಂಗ್
ಪುರಿಜಗನ್ನಾಥ:130ನೇ ರಥಯಾತ್ರೆ
ಉಗ್ರಗಾಮಿತ್ವ ನನ್ನ ರಕ್ತದಲ್ಲಿ ಇಲ್ಲ-ಹನೀಫ್
ಭಯೋತ್ಪಾದನೆ ನಿಗ್ರಹದಲ್ಲಿ ಮೃದುಧೋರಣೆ:ಬಿಜೆಪಿ
ಚುನಾವಣೆ ತ್ಯಜಿಸಲು ತೃತೀಯರಂಗ ನಿರ್ಧಾರ
ವಿಶ್ವ ಹಿಂದಿಸಮ್ಮೇಳನ- ಕಿಮೂನ್ ಹಿಂದಿಕುಟುಂಬ