ಆಗಸ್ಟ್ ತಿಂಗಳಲ್ಲಿ ಜರುಗಲಿರುವ ಉಪರಾಷ್ಟ್ರಪತಿ ಆಯ್ಕೆಗಾಗಿರುವ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ರಾಜ್ಯಸಭೆಯ ಮಾಜಿ ಉಪಾಧ್ಯಕ್ಷೆ ನಜ್ಮಾ ಹೆಪ್ತುಲ್ಲಾ ಅವರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಬಲ ಹಣಾಹಣಿ ನಡೆಯುವ ಸಾಧ್ಯತೆ ಇದೆ ಇಂಬುದು ಸಧ್ಯ ತಿಳಿದು ಬಂದಿರುವ ಮಾಹಿತಿಯಾಗಿದ್ದು, ತೃತೀಯ ರಂಗ ತನ್ನದೇ ಅಭ್ಯರ್ಥಿ ಹುಡುಕುತ್ತಿದ್ದರೆ, ಯುಪಿಎ ಅಂಗ ಪಕ್ಷ ವಾದ ಎಡರಂಗ ಸರ್ವ ಸಮ್ಮತ ಅಭ್ಯರ್ಥಿಯನ್ನು ತನ್ನ ಪರವಾಗಿ ಕಣಕ್ಕಿಳಿಸುವ ನಿರೀಕ್ಷೆಯಲ್ಲಿದೆ.
ಇತರ ಎರಡು ಒಕ್ಕೂಟಗಳು ತಮ್ಮ ಅಭ್ಯರ್ಥಿಗಳ ಆಯ್ಕೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯೂ ಈ ಸಂಬಂಧ ತನ್ನ ಪ್ರಯತ್ನವನ್ನು ತುರುಸು ಗೊಳಿಸಿರುವುದಾಗಿ ಪಕ್ಷ ತಿಳಿಸಿದೆ.
|