ಗುಜರಾತ್‌ನಲ್ಲಿ ಸಂಭವಿಸಿದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ 179 ಮಂದಿಯ ಹೇಳಿಕೆಗಳನ್ನು ದಾಖಲಿಸಿರುವ ತನಿಖಾತಂಡ, ಇದನ್ನಾಧರಿಸಿ ಭಾನುವಾರ 13 ಮಂದಿಯನ್ನು ಬಂಧಿಸಿದೆ.
ಮಾಫಿಯಾ ಆರೋಪಿ ಸೋಹ್ರಾಬುದ್ದೀನ್ ಶೇಕ್ ಹಾಗೂ ಪತ್ನಿ ಕೌಸರಾ ಬೀ ಇವರ ನಕಲಿ ಎನ್‌ಕೌಂಟರ್ ಹತ್ಯೆ ಕುರಿತಾದ ಪ್ರಕರಣದಲ್ಲಿ ಮೂರು ಮಂದಿ ಪ್ರಮುಖ ಪೊಲೀಸ್ ಅಧಿಕಾರಿಗಳು ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ. ಇದೀಗ 13 ಮಂದಿಯ ಸೆರೆ ಹೊಸ ಬೆಳವಣಿಗೆಯಾಗಿದೆ.
ಪ್ರಸ್ತುತ ಮಹತ್ವದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಗುಜರಾತ್ ಪೊಲೀಸರು ಮುಂದಿನ ಎರಡು ವಾರಗಳಲ್ಲಿ ಆರೋಪಪಟ್ಟಿ ಸಲ್ಲಿಸುವರೆಂದು ಹೇಳಲಾಗುತ್ತಿದೆ. ಆದಾಗ್ಯೂ ಪ್ರಾಥಮಿಕ ತನಿಖೆಯನ್ನಾಧರಿಸಿದ ಆರೋಪ ಪಟ್ಟಿ ಇನ್ನೊಂದು ದಿನದಲ್ಲಿ ಸಲ್ಲಿಸುವ ಹೇಳಿಕೆ ಇದೆ.
ಬಂಧನಕ್ಕೊಳಗಾಗಿರುವ 13 ಮಂದಿ ಆರೋಪಿಗಳ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ತನ್ಮಧ್ಯೆ ಎನ್‌ಕೌಂಟರ್ ಪ್ರಕರಣದಲ್ಲಿ ಆಂಧ್ರಪ್ರದೇಶದಂತಹ ನೆರೆ ರಾಜ್ಯಗಳ ಪೊಲೀಸರ ಶಾಮೀಲಾತಿಯೂ ಇದೆ ಎಂಬ ಗುಮಾನಿ ಕೇಳಿಬರುತ್ತಿದೆ.
|