ಪುರಿಯ ಪ್ರಖ್ಯಾತ ಜಗನ್ನಾಥ ಸ್ವಾಮಿ ದೇವಾಲಯದ ಶತಮಾನೋತ್ತರ ವಾರ್ಷಿಕ ರಥಯಾತ್ರೆ ಆರಂಭವಾಗಿದೆ. ಇನ್ನೊಂದು ಕುಂಭಮೇಳದ ಪ್ರತೀತಿ ನಿರ್ಮಾಣವಾಗಿದೆ.
ಪ್ರಸ್ತುತ ವಿಶ್ವವಿಖ್ಯಾತ ಜಗನ್ನಾಥ ದೇವಸ್ಥಾನದ 130ನೇ ರಥಯಾತ್ರೆ ಇಂದಿನಿಂದ ಆರಂಭವಾಗಿರುವುದರಿಂದ, ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಲಿದ್ದಾರೆ. ವರ್ಣರಂಜಿತ ಮೆರವಣಿಗೆಯಲ್ಲಿ 16ಕ್ಕೂ ಮಿಕ್ಕು ಆನೆಗಳ ಭವ್ಯ ಮೆರವಣಿಗೆಯೊಂದಿಗೆ ದೇವರ ಅಂಬಾರಿ, ಬೃಹತ್ ರಥದೊಂದಿ ಶೋಭಾಯಾತ್ರೆ ನಡೆಯುವುದು.
ದೇವಾಲಯ ಭಯೋತ್ಪಾದಕರ ಹಿಟ್‌ಲಿಸ್ಟ್‌ನಲ್ಲಿರುವ ಸಾಧ್ಯತೆಯಿಂದ ಬಿಗು ಪಹರೆ ಈಗಾಗಲೇ ಚಾಲನೆಯಲ್ಲಿದೆ. ದೇವರ ರಥಯಾತ್ರೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿವೆ.
ರಥಯಾತ್ರೆಗೆ ಪೂರ್ವಭಾವಿಯಾಗಿ ಕಳೆದದಿನ ಅಣಕು ಕಾರ್ಯಕ್ರಮಗಳು, ಪಹರೆ ಭದ್ರತೆಗಳನ್ನು ನಡೆಸಲಾಯಿತು. ಪ್ರಸ್ತುತ ಜಗನ್ನಾಥ ದೇವರ 130ನೇ ವಾರ್ಷಿಕ ರಥಯಾತ್ರೆಗೆ ಜಗತ್ತಿನಾದ್ಯಂತದ ಭಕ್ತರು ಸೇರಲಿದ್ದಾರೆ. ದೇವರ ದರ್ಶನ ಭಾಗ್ಯಪಡೆಯಲಿದ್ದಾರೆ.
|