ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಗ್ರರಿಂದ ಇಬ್ಬರ ಹತ್ಯೆ
ಗ್ರಾಮ ಸಂರಕ್ಷಣಾ ದಳದ ಸದಸ್ಯರ ಮನೆಗೆ ನುಗ್ಗಿ ಉಗ್ರರು ಮನಬಂದಂತೆ ಗುಂಡು ಹಾರಿಸಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಮ್ಮುವಿಗೆ ಹತ್ತಿರವಿರುವ ದಲಹಾಲ್ ಎನ್ನುವ ಗ್ರಾಮಕ್ಕೆ ನುಗ್ಗಿದ ಅಪರಿಚಿತ ಉಗ್ರಗಾಮಿಗಳು ಮುಖೇಶ್ ಕುಮಾರ್ ಎಂಬುವರ ಮನೆಯಲ್ಲಿ ಗುಂಡಿನ ಸುರಿಮಳೆಗೈದಿದ್ದರಿಂದ ಮುಖೇಶ್ ಕುಮಾರ ಸಹೋದರ ದೇವರಾಜ್ ಹಾಗೂ ಆತನ 9 ವರ್ಷ ವಯಸ್ಸಿನ ಮಗಳು ಹತ್ಯೆಯಾಗಿದ್ದಾರೆ.

ಉಗ್ರರ ದಾಳಿಯಲ್ಲಿ ಮುಖೇಶ್ ಕುಮಾರ್ ಅವರ ಪತ್ನಿ ಗಾಯಾಳುಗಳಾಗಿದ್ದು ಮನೆಯ ಇನ್ನಿತರ ಸದಸ್ಯರು ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯ ಸಂದರ್ಭದಲ್ಲಿ ಮುಖೇಶ್ ಕುಮಾರ್ ಮನೆಯಲ್ಲಿ ಇಲ್ಲದಿರುವುದರಿಂದ ಅವರು ಬದುಕುಳಿದಿದ್ದಾರೆ

ದಾಳಿಯ ನಂತರ ಉಗ್ರರು ಗ್ರಾಮದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಪುರಿ:130ನೇ ರಥಯಾತ್ರೆ ಆರಂಭ
ಗುಜರಾತ್ ನಕಲಿಎನ್‌ಕೌಂಟರ್:13ಸೆರೆ
ಉ.ರಾಷ್ಟ್ರಪತಿ:ನಜ್ಮಾ ಬಿಜೆಪಿ ಅಭ್ಯರ್ಥಿ
'ಉಪರಾಷ್ಟ್ರಪತಿ'-ಎಡರಂಗ ಹುಡುಕಾಟ
ನಿಯಂತ್ರಣ ರೇಖೆ ಶಾಂತಿ ಸೂಚಕ-ಸಿಂಗ್
ಪುರಿಜಗನ್ನಾಥ:130ನೇ ರಥಯಾತ್ರೆ