ಲಂಡನ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಬಂಧಿತನಾದ ಶಂಕಿತ ಉಗ್ರ ಬೆಂಗಳೂರು ಮೂಲದ ಹನೀಪ್ನನ್ನು ಆಸ್ಟ್ರೇಲಿಯಾ ಪೊಲೀಸರು ಶೋಷಣೆಗೊಳಪಡಿಸುತ್ತಿದ್ದಾರೆ ಎಂದು ಹನೀಫ್ ಪತ್ನಿ ಫಿರ್ದೋಸ್ ಇಂದು ಮಧ್ಯಾಹ್ನ ಸುದ್ದಿಗಾರರಲ್ಲಿ ಆಪಾದಿಸಿದ್ದಾರೆ.
ತನ್ನ ಪತಿ ಅಪರಾಧಿಯಲ್ಲ. ಅವರೆಂದೂ ಉಗ್ರಗಾಮಿ ಚಟುವಟಿಕೆಯಲ್ಲಿ ಪಾಲುಗೊಂಡಿಲ್ಲ. ಹಾಗಿದ್ದೂ ಅವರನ್ನು ಬಂದನದಲ್ಲಿಡಲಾಗಿದೆ. ಈ ಸಂಬಂಧ ವಿದೇಶಾಂಗ ಸಚಿವರನ್ನು ಭೇಟಿ ಮಾಡುವೆ. ಅವರಲ್ಲಿ ತಮ್ಮ ಪತಿಯನ್ನು ಮರಳಿ ಭಾರತಕ್ಕೆ ಕಳುಹಿಸುವಂತೆ ಕೇಳಿಕೊಳ್ಳುವೆ ಎಂದು ಹೇಳಿಕೊಂಡಿದ್ದಾಳೆ.
ಹನೀಪ್ನನ್ನು ಭೇಟಿ ಮಾಡುವ ಸಂಬಂಧ ತನ್ನ ಸೋದರ ಸಂಬಂಧಿಯೋರ್ವ ಸದ್ಯದ ಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ತನಗೆ ನ್ಯಾಯ ಕೊಡಿ ಎಂದು ಮಾಧ್ಯಮ ಮಂದಿಯಲ್ಲಿ ಕೇಳಿಕೊಂಡಿದ್ದಾಳೆ
|