ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಿಖ್ ಗುಂಪುಗಳ ನಡುವೆ ಮತ್ತೆ ಘರ್ಷಣೆ
ದೇರಾ ಗುರು ಬಾಬಾ ಗುರ್ಮಿತ್ ಸಿಂಗ್ ರಾಂ ರಹೀಂ ಸಿಂಗ್ ಅವರನ್ನು ಬಂಧಿಸಬೇಕೆನ್ನುವ ಸಿಖ್‌ರು ಹಾಗೂ ದೇರಾ ಗುರುವಿನ ಬೆಂಬಲಿಗರ ನಡುವೆ ಸೋಮವಾರ ಮತ್ತೆ ಘರ್ಷಣೆ ಸಂಭವಿಸಿದೆ.

ಸಿರ್ಸಾಗೆ ಸಮೀಪ ಘೂಕಮನ್ ವಾಲಿ ಎಂಬಲ್ಲಿ ಘರ್ಷಣೆ ಸಂಭವಿಸಿದ್ದು , ಸಿಖ್ ಕಾರ್ಯಕರ್ತರು ಹಾಗೂ ಡೇರಾ ಮುಖಂಡರ ನಡುವೆ ಕಲ್ಲು ತೂರಾಟ, ಹೊಯ್‌ಕೈ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಸಿಖ್‌ ಬಣಗಳ ಘರ್ಷಣೆ ನಿವಾರಿಸಲು ಪೊಲೀಸರು, ಹಾಗೂ ಕ್ಷಿಪ್ರ ಕಾರ್ಯಪಡೆ ರಂಗ ಪ್ರವೇಶ ಮಾಡಿದೆ . ಪ್ರದೇಶದಲ್ಲಿ ಬಿಗು ಪಹರೆ ವಿನ್ಯಾಸಗೊಳಿಸಲಾಗಿದೆ.

ಸಿಖ್ ಧರ್ಮಗುರುವಿನ ಜಾಹೀರಾತು ಪ್ರಕಟಿಸಿ ದೇರಾ ಗುರು ಅವಮಾನ ಮಾಡಿದರೆಂಬ ಪ್ರಕರಣ ಕಳೆದ ತಿಂಗಳ ಭಾರೀ ರಕ್ತಪಾತಕ್ಕೆ ಕಾರಣವಾಗಿತ್ತು. ಬಳಿಕ ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣದಲ್ಲಿ ದೇರಾ ಗುರುವಿನ ಬಂಧನಕ್ಕೆ ಆದೇಶವಿದ್ದರೂ, ಅವರು ಜಾಮೀನು ರಕ್ಷಣೆ ಪಡೆದಿದ್ದರು. ಈ ನಡುವೆ, ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದೆ.
ಮತ್ತಷ್ಟು
ನಕಲಿ ಪಾಸ್‌ಪೋರ್ಟ್: ಬೇಡಿ ಆರೋಪ ಮುಕ್ತ
ವಿದೇಶಾಂಗ ಸಚಿವರನ್ನು ಭೇಟಿ : ಹನೀಫ್ ಪತ್ನಿ ಇಂಗಿತ
ಉಗ್ರರಿಂದ ಇಬ್ಬರ ಹತ್ಯೆ
ಪುರಿ:130ನೇ ರಥಯಾತ್ರೆ ಆರಂಭ
ಗುಜರಾತ್ ನಕಲಿಎನ್‌ಕೌಂಟರ್:13ಸೆರೆ
ಉ.ರಾಷ್ಟ್ರಪತಿ:ನಜ್ಮಾ ಬಿಜೆಪಿ ಅಭ್ಯರ್ಥಿ