ಎಫ್‌ಸಿಐ ಅಧಿಕಾರಿ ಪಹುಲ್ ಚಂದ್ ರಾಮ್ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಸರಕಾರ ಭಾಗಿಯಾಗಿದೆ ಎಂಬ ಆಪಾದನೆಗಳಿಂದ ಮನನೊಂದಿರುವ ಅಸ್ಸಾಮ್ ಸರಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ತರುಣ್ ಗೊಗಾಯಿ ಅವರಿಂದ ಗೌಹಾಟಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ರಾಮ್ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ. ತನ್ಮೂಲಕಸತ್ಯಾಂಶ ಬಹಿರಂಗವಾಗುವ ನಿರೀಕ್ಷೆ ಇದೆಎಂದಿದ್ದಾರೆ.
ಜಲೈ 12 ರಂದು ಬೊರ್ಕವಾನಿಟೆಮಾ ಹಳ್ಳಿಯಲ್ಲಿ ಅಪಹರಣಕ್ಕೀಡಾದ ರಾಮ್ ಎರಡು ಮೂರು ಗುಂಡಗಳ ಹೊಡೆತಕ್ಕೆ ಬಲಿಯಾಗಿದ್ದರು. ಈ ಪ್ರಕರಣದಲ್ಲಿ ಪೋಲಿಸರು ಮತ್ತು ಸರಕಾರ ಒಳಗೊಂಡಿದ್ದಾರೆ ಎಂಬುದು ನಿರಾಧಾರ, ಸುಳ್ಳು ಮತ್ತು ದ್ವೇಷದಿಂದ ಕೂಡಿದೆ ಎಂದು ಮುಖ್ಯ ಮಂತ್ರಿ ತರುಣ್ ಅವರು ತಮ್ಮ ಪ್ರಥಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದರು.
ಈ ಪ್ರಕರಣದಲ್ಲಿ ನಾನೂ ಶಾಮೀಲಾಗಿರುವ ಹೇಳಿಕೆಗಳು, ಆಪಾದನೆಗಳಿವೆ. ಆದೆರ ಇದು ಕೇವಲ ಸರಕಾರದ ತೇಜೊವಧೆಗಾಗಿ ಕೆಲವ ಹುನ್ನಾರವಾಗಿದೆ ಎಂದು ಎಂದು ಅವರು ತಿಳಿಸಿದರು.
ಮೃತಪಟ್ಟಿರುವ ರಾಮ್ ಅವರ ಪುತ್ರ ಪ್ರಬಿನ್ ಕೂಡಾ ಹತ್ಯಾಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ. ಕುಟುಂಬ ತನಿಖೆಯನ್ನು ಬಯಸಿದರೆ, ನಾವು ಸಿದ್ಧ. ಇದರಲ್ಲಿ ಮುಚ್ಚಿಡುವಂಥದ್ದು ಏನಿಲ್ಲ ಎಂದರು.
|