ತ್ರಿಪಕ್ಷೀಯ ಸಂಬಂಧ ವೃದ್ಧಿಗಾಗಿ ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ವಿದೇಶಾಂಗ ಸಚಿವರ ಮಾತುಕತೆಯು ನವದೆಹಲಿಯಲ್ಲಿ ಪ್ರಾರಂಭವಾಗಿದೆ.
ಈ ಮಾತುಕೆತಯಲ್ಲಿ ಇಂಧನ ಕ್ಷೇತ್ರದಲ್ಲಿನ ಸಹಕಾರ ವೃದ್ಧಿ, ರಕ್ಷಣಾ ಮತ್ತು ಇತರೆ ಕ್ಷೇತ್ರಗಳ ಸಂಬಂಧ ಸುಧಾರಣೆ ಕುರಿತು ಚರ್ಚೆ ನಡೆಯಲಿದೆ.
ಒಂದು ದಿನದ ಈ ಸಭೆಯಲ್ಲಿ ಮೂರು ರಾಷ್ಟ್ರಗಳು ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ದ್ವಿತೀಯ ಐಬಿಎಸ್ಎ ಶೃಂಗಸಭೆಯ ಕುರಿತು ತಮ್ಮ ವಿಚಾರ ಮಂಡಸಲಿವೆ.
ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ(ಐಬಿಎಸ್ಎ) ಮೂರನೇಯ ತೃತೀಯ ಆಯೋಗ ಸಭೆಯ ಅಧ್ಯಕ್ಷತೆಯನ್ನು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ವಹಿಸಲಿದ್ದಾರೆ. ಈ ಸಭೆಯಲ್ಲಿ ಬ್ರೆಜಿಲ್ ವಿದೇಶಾಂಗ ಸಚಿವ ಸೆಲ್ಸೊ ಅಮೊರಿಮ್ ಮತ್ತು ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವ ನೊಸಾಜಾನ್ ದ್ಲಾಮಿನಿ ಜುಮಾ ಭಾಗವಹಿಸಲಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬ್ರೆಜಿಲ್‍ನಲ್ಲಿ ನಡೆದ ಐಬಿಎಸ್‌ಎ ಪ್ರಥಮ ಐತಿಹಾಸಿಕ ಶೃಂಗಸಭೆಯ ಪ್ರಗತಿಯನ್ನು ಪರೀಕ್ಷೆ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ನವತೇಜ್ ಸರಾನಾ ಅವರು ಹೇಳಿದ್ದಾರೆ.
|