ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣುಒಪ್ಪಂದ- ಅಧಿಕಾರಿಗಳ ಮಾತುಕತೆ
ಭಾರತ-ಅಮೆರಿಕ ಅಣು ಒಪ್ಪಂದ ಕುರಿತು ಮಹತ್ವದ ಮಾತುಕತೆ ನಡೆಸುವುದಕ್ಕಾಗಿ ಭಾರತೀಯ ಹಿರಿಯ ಅಧಿಕಾರಿಗಳು ವಾಷಿಂಗ್ಟನ್‍‌ಗೆ ತೆರಳಿದ್ದಾರೆ.

ಮೇ ತಿಂಗಳನಲ್ಲಿ ನಡೆದ ಮಾತುಕತೆಯಲ್ಲಿ ತಾಂತ್ರಿಕ ಮಟ್ಟದ ಚರ್ಚೆ ನಡೆದಿತ್ತು. ಆದರೆ ಮಾತುಕತೆ ನಿರೀಕ್ಷಿಸಿದಷ್ಟು ಯಶಸ್ವಿಯಾಗಿರಲಿಲ್ಲ. ಐತಿಹಾಸಿಕ ಒಪ್ಪಂದದ ಅಂತಿಮ ರೂಪುರೇಶೆ ಈ ವಾರ ಗೊತ್ತಾಗಲಿದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ, ವಿದೇಶಾಂಗ ಕಾರ್ಯದರ್ಶಿ ಮತ್ತು ಡಿಎಇ ಮುಖ್ಯಸ್ಥರು ಪಾಲ್ಗೊಂಡಿರುವ ಈ ಮಾತುಕತೆಯಲ್ಲಿ ಒಪ್ಪಂದ ಅಗತ್ಯತೆ ಕುರಿತು ಸ್ಪಷ್ಟವಾದ ವಿಚಾರಗಳು ಚರ್ಚೆಗೆ ಬರಲಿವೆ ಎಂದು ನಂಬಲಾಗಿದೆ.

ಅಂತಾರಾಷ್ಟ್ರೀಯವಾಗಿ ರಕ್ಷಿಸಲಾಗುವ ಬಳಸಲಾದ ಇಂಧನ ಮರುಪ್ರಕ್ರಿಯೆ ರಾಷ್ಟ್ರೀಯ ಸೌಕರ್ಯಕ್ಕೆ ಭಾರತ ತನ್ನ ಪ್ರಸ್ತಾಪವನ್ನು ಸಿದ್ಧಪಡಿಸಿದೆ. ಭಾರತೀಯ ಸೇನಾ ವಲಯದಲ್ಲಿ ಈ ಇಂಧನ ಬಳಕೆಯಾಗುವ ಕುರಿತು ಅಮೆರಿಕ ಆತಂಕ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಅಡೆತಡೆಗಳನ್ನು ದಾಟಿ, ಭಾರತ ಅಣು ಪರೀಕ್ಷೆ ಮಾಡಿರುವುದು ಮತ್ತಷ್ಟು ಸಮಸ್ಯೆಯನ್ನು ಸೃಷ್ಠಿಸಿರುವುದು ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು
ವಿದೇಶಾಂಗ ಸಚಿವರ ಮಾತುಕತೆ
ರಾಮ್‌ ಹತ್ಯೆ: ಸಿಬಿಐ ತನಿಖೆ
ಸಿಖ್ ಗುಂಪುಗಳ ನಡುವೆ ಮತ್ತೆ ಘರ್ಷಣೆ
ನಕಲಿ ಪಾಸ್‌ಪೋರ್ಟ್: ಬೇಡಿ ಆರೋಪ ಮುಕ್ತ
ವಿದೇಶಾಂಗ ಸಚಿವರನ್ನು ಭೇಟಿ : ಹನೀಫ್ ಪತ್ನಿ ಇಂಗಿತ
ಉಗ್ರರಿಂದ ಇಬ್ಬರ ಹತ್ಯೆ