ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ಸಮುದಾಯದವರಿಗೆ ಮೀಸಲಾತಿ ನೀಡುವ ಸರ್ಕಾರಕ್ಕೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವು ಗೊಳಿಸಬೇಕೆಂಬ ಮನವಿಯ ವಿಚಾರಣೆಯನ್ನು ಜುಲೈ 31ಕ್ಕೆ ನಿಗದಿಪಡಿಸಲಾಗಿದೆ.
ಒಬಿಸಿ ವಿಭಾಗದವರಿಗೆ ಶೇಕಡಾ 27ರಷ್ಟು ಮೀಸಲಾತಿ ಒದಗಿಸುವ ನಿರ್ಧಾರಕ್ಕೆ ನೀಡಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಕೇಂದ್ರ ಸರಕಾರ ನಿನ್ನೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಜುಲೈ 31ರಂದು ನಡೆಸಲು ತೀರ್ಮಾನಿಸಿರುವುದಾಗಿ ನ್ಯಾಯಾಲಯ ಇಂದು ತಿಳಿಸಿದೆ.
ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ನೀಡುವ ಉದ್ದೇಶದಿಂದ ರಚಿಸಲಾಗಿರುವ 2006 ನೇ ಸಾಲಿನ ಪ್ರವೇಶದಲ್ಲಿ ಮೀಸಲಾತಿ ಕಾನೂನಿನಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಕೋಟಾಕ್ಕೆ ಧಕ್ಕೆ ಉಂಟಾಗುವುದಿಲ್ಲ.
ಅಭ್ಯರ್ಥಿಗಳ ಪ್ರವೇಶ ಸಂಖ್ಯೆಯಲ್ಲಿ ಹೆಚ್ಚಳ ಮಾಡಿ ಒಬಿಸಿ ಮತ್ತು ಪರಿಶಿಷ್ಟ ಜಾತಿ,ಪಂಗಡದವರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೀಸಲಾತಿ ನೀಡುವುದು ಸರಕಾರದ ಉದ್ದೇಶ ಎಂದು ಮನವಿಯಲ್ಲಿ ವಿವರಿಸಿತ್ತು.
ಈ ತಡೆಯಾಜ್ಞೆಯನ್ನು ಮುಂದುವರಿಸಿದರೆ ಮೀಸಲಾತಿ ಕೋಟಾದಡಿ ಆಯ್ಕೆಯಾಗಿರುವ ಒಬಿಸಿ,ಪರಿಶಿಷ್ಟ ಜಾತಿ,ಪಂಗಡದ ಅಭ್ಯರ್ಥಿಗಳು ಪ್ರವೇಶ ದೊರೆಯದೆ ಒಂದು ವರ್ಷದ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಕೇಂದ್ರ ಮನವಿಯಲ್ಲಿ ತಿಳಿಸಿತ್ತು.
|