ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮುಂಬೈಸ್ಫೋಟ:ಮೂವರಿಗೆ ಮರಣದಂಡನೆ
ಹದಿನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ಮುಂಬೈಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಟಾಡಾ ವಿಶೇಷ ನ್ಯಾಯಾಲಯವು ಅತ್ಯಂತ ನಿರ್ಣಾಯಕ ತೀರ್ಪಿನಲ್ಲಿಂದು 3 ಮಂದಿಗೆ ಮರಣದಂಡನೆ ವಿಧಿಸಿದೆ.

ಮುಂಬೈ ಸರಮಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಪರ್ವೇಜ್ ಶೇಕ್, ಮಹೂದ್ ಮುಶ್ತಾಕ್ ತರಾನಿ ಹಾಗೂ ಅಬ್ದುಲ್ ಗನಿ ತುರ್ಕ್ ಎಂಬವರು ಟಾಡಾ ನ್ಯಾಯಾಲಯದಿಂದ ಮರಣದಂಡನೆಗೆ ತೀರ್ಪಾದವರಾಗಿದ್ದಾರೆ.

ಪರ್ವೇಜ್ ಶೇಕ್ ಸ್ಫೋಟದ ರೂವಾರಿ ಟೈಗರ್ ಮೆಮನ್‌ನ ಸಹವರ್ತಿ ಎಂದು ಗುರುತಿಸಲಾಗಿದೆ. ಈತ ಕತಾಬಝಾರ್ ಹಾಗೂ ಸೀರಾಕ್ ಹೊಟೇಲ್‌ನಲ್ಲಿ ಭಾರೀ ಪ್ರಮಾಣದ ಆರ್‌ಡಿಎಕ್ಸ್ ಸ್ಪೋಟಕವನ್ನು ಅವಿತಿರಿಸಿ, ಆಸ್ಫೋಟಮನತ್ತು ಸಾವು ನೋವಿಗೆ ಕಾರಣನಾಗಿದ್ದನು.

ಇನ್ನೋರ್ವ ಆರೋಪಿ ತರಾನಿಯು ಜುಹುವಿನಲ್ಲಿರುವ ಸೆಂಚುರಾ ಹೊಟೇಲ್‌ನಲ್ಲಿ ಆರ್ಡಿಎಕ್ಸ್ ಸ್ಫೋಟಕವನ್ನು ಇರಿಸಿ, ಆಸ್ಫೋಟ ನಡೆಸಿದ ಆರೋಪ ಹೊತ್ತಿದ್ದನು. ತನ್ಮಧ್ಯೆ ಕಳೆದ ದಿನ ಪ್ರಕರಣದ ಆರೋಪಿಗಳಾದ ಇಂಮ್ತಿಯಾಜ್ ಗವಾಟೆ ಹಾಗೂ ಗ್ರೆನೇಡ್ ಎಸೆತದ ನಸೀಮ್ ಬಾರ್ಮರೆ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇವರಿಗೆ ಅನುಕ್ರಮವಾಗಿ 2.77 ಹಾಗೂ 2.30 ಲಕ್ಷ ದಂಡವನ್ನೂ ವಿಧಿಸಲಾಗಿತ್ತು.

ಮುಂಬೈಯ ವಿವಿಧೆಡೆ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಪಟ್ಟಿಯಲ್ಲ್ಲಿರುವ 100 ಮಂದಿಯಲ್ಲಿ ಈ ವರೆಗೆ 77 ಮಂದಿಗೆ ಶಿಕ್ಷೆಯಾಗಿದೆ. ಇವರಲ್ಲಿ 14 ಮಂದಿಗೆ ಜೀವಾವಧಿಯಾಗಿದೆ.

ಸಂಜಯ್ ದತ್: ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಬಾಲಿವುಡ್ ನಟ ಸಂಜಯ್ ದತ್, ಅಕ್ರಮ ಆಯುಧ ಹೊಂದಿರುವುದರ ಕುರಿತಂತೆ ವಿಚಾರಣೆ ಎದುರಿಸುತ್ತಿದ್ದು, ತೀರ್ಪಿನ ಕುರಿತಂತೆ ಕುತೂಹಲ ಹರಡಿದೆ.
ಮತ್ತಷ್ಟು
ಜೈಲಲ್ಲಿರುವ ಪಪ್ಪು ಯಾದವ್‌‌ ಮತದಾನ
ತಡೆಯಾಜ್ಞೆ ಜು. 31ರಂದು ವಿಚಾರಣೆ
ಯುಎನ್‌ಪಿಎ ನಿರ್ಧಾರದ ವಿರುದ್ಧ ಆಯೋಗಕ್ಕೆ ದೂರು
ಅಣುಒಪ್ಪಂದ- ಅಧಿಕಾರಿಗಳ ಮಾತುಕತೆ
ವಿದೇಶಾಂಗ ಸಚಿವರ ಮಾತುಕತೆ
ರಾಮ್‌ ಹತ್ಯೆ: ಸಿಬಿಐ ತನಿಖೆ