ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭರಪೂರ ಮಳೆಯಿಂದಾಗಿ ಈ ವರೆಗೆ 23ಮಂದಿ ಸಾವನ್ನಪ್ಪಿರುವ ಮಾಹಿತಿ ಲಭಿಸಿದೆ. ಪ್ರವಾಹ ದುರಂತಗಳಲ್ಲಿ 7 ಮಂದಿ ಕಾಣೆಯಾಗಿದ್ದಾರೆ.
ರಾಜ್ಯದ ಕಾಸರಗೋಡು, ಕೋಝಿಕ್ಕೋಡು, ಕಣ್ಣೂರು,ಮಲಪ್ಪುರಂ,ವಝನಾಡ್, ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆ ಪ್ರದೇಶದಾದ್ಯಂತ ನೆರೆಹಾವಳಿಯನ್ನುಂಟುಮಾಡಿದೆ. ಪ್ರವಾಹದಿಂದಾಗಿ ತ್ರಿಶ್ಶೂರು, ಇಡುಕ್ಕಿ ಮುಂತಾದ ನೆರೆಯ ಜಿಲ್ಲೆಗಳೂ ಆತಂಕಗೊಂಡಿವೆ.
ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರಕುವ ಮಳೆಯಿಂದ ಸಂತ್ರಸ್ತರಾದ 3000 ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಿರುವುದಾಗಿ ಸರ್ಕಾರಿ ಮೂಲಗಳು ತಿಳಿಸಿವೆ. ಭರಪೂರ ಮಳೆಯಿಂದಾಗಿ ಸುರಕ್ಷಾ ಕಾರ್ಯಗಳಿಗೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಮುನ್ಸೂಚನೆಯಂತೆ ಮುಂದಿನ 2 ದಿನಗಳ ಕಾಲ ಮುಸಲಧಾರೆ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಕೇರಳದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಸರ್ಕಾರವೂ ತುರ್ತುಸ್ಥಿತಿಯಾಗಿ ಕಾರ್ಯಾಚರಣೆಗೆ ಸಿದ್ಧವಾಗಿದೆ.
|