ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮುಂಬೈ:ಕಟ್ಟಡದಡಿ ಸಾವಿನ ಸಂಖ್ಯೆ21
ಮಹಾನಗರದಲ್ಲಿ ಸಂಭವಿಸಿದ ಆರು ಮಹಡಿಯ ಕಟ್ಟಡದ ಪಾರ್ಶ್ವಭಾಗ ಕುಸಿದ ದುರಂತದಲ್ಲಿ ಇದುವರೆಗೆ 21 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳ ಸಂಖ್ಯೆ 11ಕ್ಕೇರಿದೆ.

ಕಳೆದ ರಾತ್ರಿ ಸಂಭವಿಸಿದ ಪ್ರಸ್ತುತ ದುರಂತದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಂಶಯವಿದೆ. ಸಾವು ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ

ಬೊರಿವಿಲಿಯ ಬಬಾಯಿನಾಕಾ ಹೊರವಲಯದಲ್ಲಿದ್ದ ಸುಮಾರು 20 ವರ್ಷ ಹಳೆಯ ಲಕ್ಷ್ಮೀ ಛಾಯಾ ಕಟ್ಟಡವು ಕುಸಿದ ಪರಿಣಾಮ 40 ಶೇಕಡ ಭಾಗ ಹಾನಿಗೊಂಡಿದೆ. ದುರಂತದಲ್ಲಿ ಮೃತ ಪಟ್ಟವರಲ್ಲಿ 7 ಮಂದಿ ಪುರುಷರು,11 ಮಂದಿ ಮಹಿಳೆಯರು ಹಾಗೂ 3 ಮಂದಿ ಮಕ್ಕಳು ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಸ್ಥಳೀಯ ಭಗವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಾದ ಮೂರು ಮಂದಿಯ ಶವಗಳ ಗುರುತು ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಕ್ಷಾ ಕಾರ್ಯಗಳು ಹಾಗೂ ಕಾಣೆಯಾದವರ ಪತ್ತೆಗಾಗಿ ಅವಶೇಷಗಳಡಿ ಹುಡುಕುವ ಕಾರ್ಯ ಇನ್ನೂ 2 ದಿನಗಳ ಕಾಲ ಜರುಗಲಿದೆ.
ಮತ್ತಷ್ಟು
ಕೇರಳದಲ್ಲಿ ಮಳೆ:23ಸಾವು
ಮುಂಬೈಸ್ಫೋಟ:ಮೂವರಿಗೆ ಮರಣದಂಡನೆ
ಜೈಲಲ್ಲಿರುವ ಪಪ್ಪು ಯಾದವ್‌‌ ಮತದಾನ
ತಡೆಯಾಜ್ಞೆ ಜು. 31ರಂದು ವಿಚಾರಣೆ
ಯುಎನ್‌ಪಿಎ ನಿರ್ಧಾರದ ವಿರುದ್ಧ ಆಯೋಗಕ್ಕೆ ದೂರು
ಅಣುಒಪ್ಪಂದ- ಅಧಿಕಾರಿಗಳ ಮಾತುಕತೆ