ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಹಿಳೆಯರೇ ಚಾಕು ಬಳಸಿ: ಉಗ್ರರ ಸಲಹೆ!
ಮಹಿಳೆಯರು ಸ್ವ-ರಕ್ಷಣೆಗಾಗಿ ತಮ್ಮ ವಶ ಕತ್ತಿ ಚೂರಿ ಚಾಕುಗಳನ್ನು ಇರಿಸಿಕೊಳ್ಳಬೇಕೆಂದು ನಿಷೇಧಿತ ಮುಸ್ಲಿಂ ಮಹಿಳಾ ಉಗ್ರವಾದಿ ಸಂಘಟನೆ ದಲ್ಕಟರನ್ ಇ ಮಿಲ್ಲತ್‌ನ ಮುಖ್ಯಸ್ಥೆ ಸೈದಾ ಆಸ್ಯಾ ಇಂದ್ರಾಬಿ ತಿಳಿಸಿದ್ದಾರೆ.

ಮುಸ್ಲಿಂ ಮಹಿಳೆಯರಿಗೆ ವಿಶೇಷವಾಗಿ ಸಲಹೆ ನೀಡಿರುವ ಅವರು ಯಾವುದೇ ಸಂದರ್ಭದಲ್ಲಿ ಅಪಾಯ ಎದುರಾದರೆ ಈ ಚಾಕುವನ್ನು ಬಳಸಬಹುದು. ಇದಕ್ಕಾಗಿ ಮಹಿಳೆಯರು ಸಾಮಾನ್ಯ ತರಬೇತಿ ಹೊಂದಬೇಕೆಂದಿದ್ದಾರೆ.

ಪ್ರಸ್ತುತ ಉಗ್ರವಾದಿ ಮುಸ್ಲಿಂ ಮಹಿಳಾ ಸಂಘಟನೆಯ ಮುಖ್ಯಸ್ಥೆಯಾಗಿರುವ ಸೈದಾ ಅವರು ಶ್ರೀನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ಸಂಘಟಿಸಿ ಈ ಹೇಳಿಕೆ ನೀಡಿದ್ದಾರೆ. ಮಹಿಳೆಯರು ತಮ್ಮ ವಶ ಇರಿಸಿಕೊಳ್ಳಬಹುದಾದ ಸಣ್ಣ ಚಾಕುವನ್ನು ಅವರು ಈ ಸಂದರ್ಭದಲ್ಲಿ ಪ್ರದರ್ಶಿಸಿದರು.

ಭಾರತದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರದ ವೇಳೆ ಮೆಣಸಿನ ಪುಡಿ ಬಳಸಿ ಎಂದು ಈ ವರೆಗೆ ಹೇಳುತ್ತಿದ್ದರೆ, ಇದೀಗ ಚಾಕು ಚೂರಿಯ ಭಾಷೆಯನ್ನು ಮಹಿಳೆಯರಿಗೆ ಕಲಿಸಲು ಉಗ್ರರು ಹೊರಟಿದ್ದಾರೆ.
ಮತ್ತಷ್ಟು
ಸರಣಿ ಸ್ಫೋಟ:ಮತ್ತೆ ಮೂವರಿಗೆ ತಲೆದಂಡ
ಶೆಖಾವತ್‌ ಪರ ಜಯ: ಪ್ರತಿಭಾ ಮುನ್ನಡೆ
ಮುಂಬೈ:ಕಟ್ಟಡದಡಿ ಸಾವಿನ ಸಂಖ್ಯೆ21
ಕೇರಳದಲ್ಲಿ ಮಳೆ:23ಸಾವು
ಮುಂಬೈಸ್ಫೋಟ:ಮೂವರಿಗೆ ಮರಣದಂಡನೆ
ಜೈಲಲ್ಲಿರುವ ಪಪ್ಪು ಯಾದವ್‌‌ ಮತದಾನ