ಆಗಸ್ಟ್ 10ರಂದು ಜರುಗಲಿರುವ ಉಪರಾಷ್ಟ್ರಪತಿ ಆಯ್ಕೆ ಚುನಾವಣೆಗಾಗಿ ಪಕ್ಷಗಳ ಕಸರತ್ತು ಆರಂಭವಾಗಿದ್ದು, ತೃತೀಯರಂಗ ಯುಎನ್‌ಪಿಎದಿಂದ ರಶೀದ್ ಮಸೂದ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗಗೆ ಗುಂಪುನಿರ್ಧಾರದಂತೆ ಮತದಾನದಿಂದ ಹೊರಗುಳಿಯದೇ ಎಡಿಎಐಡಿಎಂಕೆ ಭಿನ್ನತೆ ಪ್ರಕಟಿಸಿದ್ದರೂ, ಉಪರಾಷ್ಟ್ರಪತಿ ಚುನಾವಣೆಗಾಗಿ ಮಸೂದ್ ನಾಮಪತ್ರಕ್ಕೆ ಬೆಂಬಲ ಘೋಷಿಸಿದ್ದಾರೆ.
ಮಸೂದ್ ನಾಮಪತ್ರ ಸಲ್ಲಿಸುವ ವೇಳೆ ತೃತೀಯ ರಂಗದ ಎಲ್ಲಾ ಎಳು ಪಕ್ಷಗಳ ಮುಖಂಡರೂ ಉಪಸ್ಥಿತರಿದ್ದರು. ನಾಮಪತ್ರದಲ್ಲಿ 40 ಮಂದಿ ಸಹಿಹಾಕಿದ್ದಾರೆ. ಎಐಎಡಿಎಂಕೆ ಹಾಗೂ ಎಂಡಿಎಂಕೆ ಸಂಸದರೂ ಸಹಿದಾಖಲಿಸಿದ್ದಾರೆ.
ಕಳೆದ ದಿನದ ಮತದಾನದಲ್ಲಿ ಸಂಭವಿಸಿದ ಭಿನ್ನಾಭಿಪ್ರಾಯ, ಬಿರುಕಿನ ವದಂತಿಯ ಹಿನ್ನೆಲೆಯಲ್ಲಿಂದು ತೃತೀಯ ರಂಗದ ಎಲ್ಲಾ ಶಾಸಕರು ಮುಖಂಡರೂ ಒಂದಾಗಿ ಫೋಟೊ ತೆಗೆಸಿ, ನಾವೆಲ್ಲಾ ಬಂಡೆಯಂತೆ ಒಂದಾಗಿ ಸ್ಥಿರವಾಗಿದ್ದೇವೆ ಎಂದು ಒಕ್ಕೊರಲಿನ ಘೋಷಣೆ ಮಾಡಿದರು ಎಂದು ಅಮರ್ ಸಿಂಗ್ ತಿಳಿಸಿದ್ದಾರೆ.
ಸಂಘಟನೆಯ ನಿರ್ಧಾರಕ್ಕೆ ಭಿನ್ನವಾಗಿ ಚುನಾವಣಾ ಆಯೋಗ ಹಾಗೂ ಎನ್‌ಡಿಎ ಪ್ರಮುಖ ಎಲ್ ಕೆ ಅಡ್ವಾಣಿಯವರು ದಾರಿ ತಪ್ಪಿಸುವ ಹೇಳಿಕೆ ನೀಡಿರುವುದೇ ಕೆಲವು ಸಂಸದರು ಮತಚಲಾಯಿಸಲು ಕಾರಣ ಎಂಬುದಾಗಿ ತಿಳಿಸಿದರು. ಇಂದಿನ ಕಾರ್ಯಕ್ರಮದಲ್ಲಿ ಜಯಲಲಿತಾ ಪಾಲ್ಗೊಳ್ಳದಿರಲು ಅನಾರೋಗ್ಯ ಕಾರಣ ಎಂದು ತಿಳಿಸಿದರು.
|