ಸಂಭಾವ್ಯ ಉಪರಾಷ್ಟ್ರಪತಿ ಚುನಾವಣೆಗೆ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹಮೀದ್ ಅನ್ಸಾರಿಯವರನ್ನು ಎಡರಂಗವು ಸೂಚಿಸಿದ್ದು, ಇವರ ಅಭ್ಯರ್ಥಿತನವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟ ಬೆಂಬಲಿಸುವ ನಿರೀಕ್ಷೆ ಇದೆ.
ಎಡರಂಗದ ಪ್ರಮುಖರಾದ ಪ್ರಕಾಶ್ ಕಾರಾಟ್ ಹಾಗೂ ಸೀತಾರಾಂ ಯೆಚೂರಿಯವರು ಈ ಕುರಿತು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸುವುದಕ್ಕೂ ಮೊದಲು ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅನ್ಸಾರಿಯವರ ಅಭ್ಯರ್ಥಿತನದ ಕುರಿತು ಇಂದು ಜರುಗಲಿರುವ ಯುಪಿಎ ಎಡರಂಗದ ಸಂಚಾಲನಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಘೋಷಿಸಲಾಗುವುದು ಎಂಬ ಮಾಹಿತಿ ಲಭಿಸಿದೆ. ವಾಮಪಂಥೀಯ ಮುಖಂಡರ ಹೇಳಿಕೆಯಂತೆ ನಮಗೆ ಬೇರೆ ಅಭ್ಯರ್ಥಿಗಳ ಆಯ್ಕೆ ಇಲ್ಲ. ಆದರೆ ಇತರ ಹೆಸರುಗಳನ್ನೂ ಪರಿಗಣಿಸಲು ಅಭ್ಯಂತರವಿಲ್ಲ ಎಂದಿದ್ದಾರೆ.
|