ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸರಣಿಸ್ಫೋಟ:ಏಳನೇ ಮರಣದಂಡನೆ
ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಇಂದು ಮತ್ತೊಬ್ಬ ಆರೋಪಿಗೆ ಮರಣದಂಡನೆ ವಿಧಿಸಿದ್ದು, ಮರಣಶಿಕ್ಷೆಗೊಳಗಾದವರ ಸಂಖ್ಯೆ ಏಳಾಗಿದೆ.

ಇಂದು ಮರಣದಂಡನೆ ಶಿಕ್ಷೆಗೊಳಗಾಗಿರುವ ಆರೋಪಿಯನ್ನು ಕುಖಅಯಾತ ಟೈಗರ್ ಮೆಮನ್‌ನ ಬಲಗೈಬಂಟ ಮೊಹಮ್ಮದ್ ಇಕ್ಬಾಲ್ ಶೇಕ್ ಎಂದು ಗುರುತಿಸಲಾಗಿದ್ದು, ಈತ ಸ್ಫೋಟ ಸಂಚು, ಇತರರಿಗೆ ತರಬೇತಿ ನೀಡಿರುವುದು ಹಾಗೂ ದಾದರ್‌ನಲ್ಲಿ ಸ್ಫೋಟಕ ತುಂಬಿಸಿ ಬೈಕ್‌ನ್ನು ಆಸ್ಫೋಟಿಸಿರುವುದು ಇತ್ಯಾದಿ ಆರೋಪ ಹೊಂದಿದ್ದನು.

ಈತ 2006ರಲ್ಲಿ ಅಪರಾಧ ಪ್ರಕರಣಕ್ಕಾಗಿ ಶಿಕ್ಷೆಗೊಳಗಾಗಿದ್ದನು. ಪ್ರಸ್ತುತ ವಾರವು ಟಾಡಾ ನ್ಯಾಯಾಲಯದ ಮಹತ್ವದ ತೀರ್ಪುಗಳಿಗಾಗಿ ನಿರ್ಣಾಯಕವಾಗಿದೆ

ಸುಂಕ ಅಧಿಕಾರಿ: ತನ್ಮಧ್ಯೆ ಇಂದಿನ ನ್ಯಾಯಾಲಯ ತೀರ್ಪಿನಲ್ಲಿ ಮಾಜಿ ಸುಂಕ ಆಯುಕ್ತ ಸೋಮನಾಥ್ ಥಾಪಾ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈತ ಮುಂಬೈಯಲ್ಲಿ ಆರ್‌ಡಿಎಕ್ಸ್ ಸ್ಫೋಟಕಗಳನ್ನು ದಡಸೇರಿಸಲು ಕುಖ್ಯಾತರಿಗೆ ನೆರವಾಗಿರುವ ಆರೋಪ ಹೊಂದಿದ್ದನು.
ಮತ್ತಷ್ಟು
ಹಮೀದ್ ಅನ್ಸಾರಿ ಯುಪಿಎ ಅಭ್ಯರ್ಥಿ
ತೃತೀಯರಂಗದಿಂದ ಮಸೂದ್ ನಾಮಪತ್ರ
ಮಹಿಳೆಯರೇ ಚಾಕು ಬಳಸಿ: ಉಗ್ರರ ಸಲಹೆ!
ಸರಣಿ ಸ್ಫೋಟ:ಮತ್ತೆ ಮೂವರಿಗೆ ತಲೆದಂಡ
ಶೆಖಾವತ್‌ ಪರ ಜಯ: ಪ್ರತಿಭಾ ಮುನ್ನಡೆ
ಮುಂಬೈ:ಕಟ್ಟಡದಡಿ ಸಾವಿನ ಸಂಖ್ಯೆ21