ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹನೀಫ್ ನೆರವಿಗೆ ಸರ್ಕಾರ,ಸಿಬಿಐ
ಬ್ರಿಟನ್‌ನ ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟದ ವಿಫಲ ಪ್ರಕರಣದ ಹಿನ್ನೆಲೆಯಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ವೈದ್ಯ ಡಾ. ಮೊಹಮ್ಮದ್ ಹನೀಫ್ ‌ ರಕ್ಷಣೆಗಾಗಿ ಭಾರತ ಸರ್ಕಾರ ಸಿದ್ಧವಾಗಿದ್ದು, ಮುಂದುವರಿಯಲು ಸಿಬಿಐಗೆ ತಿಳಿಸಿದೆ.

ಸರ್ಕಾರಿ ಮೂಲಗಳು ತಿಳಿಸಿದಂತೆ ಭಯೋತ್ಪಾದಕರ ಸಂಪರ್ಕದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಅನೌಚಿತ್ಯಪೂರ್ಣವಾಗಿ ಸೆರೆಯಲ್ಲಿರಿಸಿ ಗುರುತರ ಆರೋಪ ಹೊರಿಸಿರುವ ಹನೀಫ್‌ಗಾಗಿ, ಭಾರತ ಸರ್ಕಾರವು ಕೇಂದ್ರೀಯ ತನಿಖಾ ದಳ (ಸಿಬಿಐ) ಮೂಲಕ ಅಗತ್ಯಕ್ರಮ ಕೈಗೊಳ್ಳಲು ಆದೇಶಿದೆ.

ಹನೀಫ್‌ನ ಬ್ಯಾಂಕ್‌ ಖಾತೆ ಹಾಗೂ , ಹಣವಿನಿಮಯಗಳ ಮಾಹಿತಿ ಇತ್ಯಾದಿಗಳನ್ನು ಆಸ್ಟ್ರೇಲಿಯಾದ ತನಿಖಾ ತಂಡಕ್ಕೆ ಒದಗಿಸಲು ಸರ್ಕಾರ ನಿರ್ಧರಿಸಿದೆ. ಈ ಉದ್ದೇಶಕ್ಕಾಗಿ ಅಗತ್ಯ ದಾಖಲೆ ಪತ್ರಗಳೊಂದಿಗೆ ಆಸ್ಟ್ರೇಲಿಯಾ ತನಿಖಾ ತಂಡವನ್ನು ಸಂಪರ್ಕಿಸಲು ಸಿಬಿಐಗೆ ತಿಳಿಸಲಾಗಿದೆ.

ಆಸ್ಟ್ರೇಲಿಯಾ ಸರ್ಕಾರದ ಆಟಾರ್ನಿ ಜನರಲ್ ಭಾರತ ಸರ್ಕಾರದಿಂದ ಇತ್ತೀಚೆಗೆ ಬಯಸಿದ ದಾಖಲೆ ಪತ್ರಗಳಲ್ಲಿ, ಹನೀಫ್‌ನ ಬ್ಯಾಂಕ್ ವ್ಯವಹಾರಗಳ ದಾಖಲೆ ಪತ್ರಗಳನ್ನೂ ಕೋಲಾಗಿತ್ತು. ಈ ಹಿನ್ನೆಲೆಯಲ್ಲಿ ಯುಟಿಐ ಬ್ಯಾಂಕ್,ಭಾರತೀಯ ಸ್ಟೇಟ್ ಬ್ಯಾಂಕ್ ಮುಂತಾದವುಗಳ ಬೆಂಗಳೂರು ಶಾಖೆಗಳಿಂದ ಮಾಹಿತಿ ಸಂಗ್ರಹಿಸಿ ಸಿಬಿಐ ಮೂಲಕ ರವಾನಿಸಲು ತಿಳಿಸಲಾಗಿದೆ.


ಪ್ರಕರಣಕ್ಕೆ ಸಂಬಂಧಿಸಿ ಹನೀಫ್‌ನ ತಂದೆ ಆತನಿಗೆ ಆಸ್ಟ್ರೇಲಿಯಾದಿಂದ ಭಾರತದ ಮಧ್ಯೆ ಏಕಮುಖ ವಿಮಾನ ಟಿಕೆಟ್ ಮಾತ್ರ ನೀಡಿ, ವಾಪಸಾಗುವ ಟಿಕೆಟ್ ಪಡೆಯದಿರುವ ಕುರಿತು ಕೂಡ ತೀವ್ರ ತನಿಖೆ ಮುಂದುವರಿದೆ.
ಮತ್ತಷ್ಟು
ಮಹಿಳಾ ರಾಷ್ಟ್ರಪತಿ?: ಮತಎಣಿಕೆ ಆರಂಭ
ಸರಣಿಸ್ಫೋಟ:ಏಳನೇ ಮರಣದಂಡನೆ
ಹಮೀದ್ ಅನ್ಸಾರಿ ಯುಪಿಎ ಅಭ್ಯರ್ಥಿ
ತೃತೀಯರಂಗದಿಂದ ಮಸೂದ್ ನಾಮಪತ್ರ
ಮಹಿಳೆಯರೇ ಚಾಕು ಬಳಸಿ: ಉಗ್ರರ ಸಲಹೆ!
ಸರಣಿ ಸ್ಫೋಟ:ಮತ್ತೆ ಮೂವರಿಗೆ ತಲೆದಂಡ