ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರತಿಭಾಪಾಟೀಲ್ ಆರಂಭಿಕ ಮುನ್ನಡೆ
ದೇಶದ ರಾಷ್ಟ್ರಪತಿ ಆಯ್ಕೆಗಾಗಿ ಜರುಗಿದ ಚುನಾವಣೆಯ ಮತ ಎಣಿಕೆಕಾರ್ಯ ಇದೀಗ ಪ್ರಗತಿಯಲ್ಲಿರುವಂತೆಯೇ ಕಾಂಗ್ರೆಸ್ ಎಡರಂಗ ನೇತೃತ್ವದ ಯುಪಿಎ ಒಕ್ಕೂಟದ ಅಭ್ಯರ್ಥಿ ಪ್ರತಿಭಾ ಪಾಟೀಲ್ 223 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಆಂಧ್ರ ಪ್ರದೇಶದ ಮತಗಳನ್ನಾಧರಿಸಿದ ಪ್ರಸ್ತುತ ಎಣಿಕೆ ಕಾರ್ಯದಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿರುವುದಾಗಿ ಮೊದಲ ಹಂತದ ಮಾಹಿತಿ ಲಭಿಸಿದೆ. ಪ್ರಸ್ತುತ ರಾಜ್ಯದಿಂದ ಬಿಜೆಪಿ-ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬೈರೋನ್ ಸಿಂಗ್ ಶೆಖಾವತ್ ಅವರಿಗೆ ಕೇವಲ ಎರಡು ಮತಗಳಷ್ಟೇ ಲಭಿಸಿತ್ತು.

ಆಂಧ್ರಪ್ರದೇಶದ ಮತಗಳಿಂದ ಮತ ಎಣಿಕೆ ಆರಂಭಿಸಲಾಗಿದೆ. ಈ ರಾಜ್ಯದ ಮತಗಳ ಮೌಲ್ಯ 148. ಮುಂದಿನ ಎಣಿಕೆ ಅರುಣಾಚಲ ಪ್ರದೇಶವಾಗಿದ್ದು, ದೇಶಾದ್ಯಂತದ ಇತರ ರಾಜ್ಯಗಳ ಶಾಸಕರು, ಸಂಸದರ ಮತ ಎಣಿಕೆ ಪೂರೈಸಿದ ಬಳಿಕವಷ್ಟೇ ಅಂತಿಮ ಫಲಿತಾಂಶ ಹೊರಬರಲಿದೆ.
ಮತ್ತಷ್ಟು
ಹನೀಫ್ ನೆರವಿಗೆ ಸರ್ಕಾರ,ಸಿಬಿಐ
ಮಹಿಳಾ ರಾಷ್ಟ್ರಪತಿ?: ಮತಎಣಿಕೆ ಆರಂಭ
ಸರಣಿಸ್ಫೋಟ:ಏಳನೇ ಮರಣದಂಡನೆ
ಹಮೀದ್ ಅನ್ಸಾರಿ ಯುಪಿಎ ಅಭ್ಯರ್ಥಿ
ತೃತೀಯರಂಗದಿಂದ ಮಸೂದ್ ನಾಮಪತ್ರ
ಮಹಿಳೆಯರೇ ಚಾಕು ಬಳಸಿ: ಉಗ್ರರ ಸಲಹೆ!