ದೇಶದ ರಾಷ್ಟ್ರಪತಿ ಆಯ್ಕೆಗಾಗಿ ಜರುಗಿದ ಚುನಾವಣೆಯ ಮತ ಎಣಿಕೆಕಾರ್ಯ ಅಂತಿಮ ಹಂತ ತಲುಪಿರುವಂತೆಯೇ ಕಾಂಗ್ರೆಸ್ ಎಡರಂಗ ನೇತೃತ್ವದ ಯುಪಿಎ ಒಕ್ಕೂಟದ ಅಭ್ಯರ್ಥಿ ಪ್ರತಿಭಾ ಪಾಟೀಲ್ ಗೆಲುವು ನಿಚ್ಚಳವಾಗತೊಡಗಿದೆ.
ದೇಶದ ವಿವಿಧ ರಾಜ್ಯಗಳಿಂದ ಚಲಾವಣೆ ಗೊಂಡ ಶಾಸಕೀಯ ಮತಗಳಲ್ಲಿ ಬಹುಪಾಲು ಎಣಿಕೆ ಕಾರ್ಯ ಮುಗಿದಿರುವಂತೆಯೇ ಪ್ರತಿಸ್ಪರ್ಧಿ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ (ಉಪರಾಷ್ಟ್ರಪತಿ) ಬೈರೋನ್ ಸಿಂಗ್ ಶೆಕಾವತ್ ಅವರಿಗಿಂತ ಇಮ್ಮಡಿ ಪ್ರಮಾಣದ ಮತಗಳಿಸಿದ್ದಾರೆ.
ಪ್ರತಿಭಾ ಪಾಟೀಲ್ ಅವರು ಈ ಹಂತದಲ್ಲಿ 180,000 ಮೌಲ್ಯದ (1575 ಮತಗಳು) ಮತಗಳಿಸಿದ್ದರೆ, ಬೈರೋನ್ ಸಿಂಗ್ ಶೆಖಾವತ್ ಅವರು 861 ಮತಗಳೊಂದಿಗೆ100000 ಮೌಲ್ಯದ ಮತಗಳಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗಾಗಿ ಒಟ್ಟು ಮತಗಳ ಸಂಖ್ಯೆ 10 ಲಕ್ಷದಷ್ಟಿದೆ.
|