ವಕೀಲಿ ವೃತ್ತಿಯಿಂದ ಭಾರತದ ಪ್ರಥಮ ಮಹಿಳಾ ರಾಷ್ಟ್ರಾದ್ಯಕ್ಷೆಯ ಸ್ಥಾನದವರೆಗೆ ಸಾಗಿದ ಮಹಾರಾಷ್ಟ್ರದ ಜಲಗಾಂವ್‌ನ ಪ್ರತಿಭಾ ಪಾಟೀಲ್ ಇಂದು ರಾಷ್ಟ್ರಾಧ್ಯಕ್ಷರು ಪದವಿಗೆ ನಡೆದ ಚುನಾವಣೆಯಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭೈರೋನ್ ಸಿಂಗ್ ಶೇಖಾವತ್‌ರನ್ನು ಸೋಲಿಸಿ, ರಾಷ್ಟ್ರಪತಿ ಭವನಕ್ಕೆ ತೆರಳಲು ಸಿದ್ಧರಾಗಿದ್ದಾರೆ.
ಸ್ವಾತಂತ್ರ್ಯೋತ್ತರ ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಧ್ಯಕ್ಷ ಸ್ಥಾನವು ಪುರುಷ ಪ್ರಧಾನ ಮತ್ತು ಪ್ರಾಬಲ್ಯದ ಸಂಕೇತವಾಗಿತ್ತು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿರುವ 72 ವರ್ಷದ ಪ್ರತಿಭಾ ಅವರು ರಾಜಕೀಯ ರಂಗಕ್ಕೆ ಕಾಲಿಟ್ಟ ನಂತರ ರಾಜ್ಯಸಭೆಯ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.ಇದಕ್ಕೂ ಮುನ್ನ ಮಹಾರಾಷ್ಟ್ರ ರಾಜಕಾರಣದ ಬೆನ್ನೆಲುಬು ಎಂದೇ ಹೇಳಲಾಗುವ ಸಹಕಾರಿ ರಂಗದಲ್ಲಿ ಕೂಡ ತಮ್ಮ ಛಾಪು ಒತ್ತಿದವರು ಮತ್ತು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ, ನಂತರ ರಾಜಸ್ಥಾನದ ರಾಜ್ಯಪಾಲರಾಗಿ ಕಾರ್ಯ ನಿಭಾಯಿಸಿದ್ದರು,
ಸಹಕಾರಿ ರಂಗದೊಂದಿಗೆ ಇದ್ದ ಅವರ ನಂಟು ಮೊನ್ನೆ ಮೊನ್ನೆವರೆಗೆ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ಏರಿದವರಲ್ಲಿ ಅನೇಕರು ವಿವಿಧ ಕ್ಷೇತ್ರಗಳಿಂದ ಬಂದವರಾಗಿದ್ದಾರೆ ಪ್ರತಿಭಾ ಹಿನ್ನೆಲೆ ರಾಜಕೀಯ ಮತ್ತು ಸಹಕಾರದ ಕಲಸು ಮೆಲೋಗರದಂತಿದೆ.
|