ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರತಿಭಾಗೆ ಸಂದ ಎಷ್ಟು ಮತ್ತು ಎಲ್ಲಿಂದ ?
ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಮುಗಿದಿದ್ದು, ಅದಿಕೃತವಾಗಿ ಮಹಾರಾಷ್ಟ್ರ ಮೂಲದ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಆಯ್ಕೆಯಾಗಿದ್ದಾರೆ. 3,06,810 ಮತಗಳನ್ನು ಪಡೆದಿದ್ದಾರೆ.

ರಾಷ್ಟ್ರಾದ್ಯಕ್ಷರ ಚುನಾವಣೆಯಲ್ಲಿ ಪ್ರತಿಭಾ ಪಾಟೀಲರ ಮುನ್ನಡೆಗೆ ತಿರುವು ಆಂದ್ರದಿಂದ ದೊರೆಯಿತು. ಸುಮಾರು 223 ಮತಗಳನ್ನು ಆ ಪ್ರದೇಶದಿಂದ ಸೆಳೆದ ಮಹಿಳಾ ಅಭ್ಯರ್ಥಿಯ ಗೆಲುವು ನಿಶ್ಚಿತವಾಯಿತು.

ನವದೆಹಲಿ ವಿಧಾನ ಸಭೆಯಿಂದ ಪ್ರತಿಭಾ ಪಾಟೀಲರು 50 ಓಟು ಪಡೆದರೆ, ಶೇಖಾವತ್ 19 ಮತ ಪಡೆದರು. ಆಸ್ಸಾಂ ವಿಧಾನ ಸಭಾ ಸದಸ್ಯರು ಕೂಡ ಯುಪಿಎ ಅಭ್ಯರ್ಥಿಗೆ ಭಾರಿ ಪ್ರಮಾಣದಲ್ಲಿ ಮತ ನೀಡಿದರು.

ಬಹುತೇಕ ರಾಜ್ಯಗಳ ವಿಧಾನ ಸಭಾ ಸದಸ್ಯರು ಎಡಪಕ್ಷ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದರಿಂದ ಮತ್ತು ತೃತೀಯ ರಂಗ ತಟಸ್ಥವಾಗಿ ಉಳಿದ ಪರಿಣಾಮವಾಗಿ ಪ್ರತಿಭಾ ಪಾಟೀಲ್ ಗೆಲುವು ಸುಲಭವಾಯಿತು.
ಮತ್ತಷ್ಟು
ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್
ಪ್ರತಿಭಾಪಾಟೀಲ್ ಗೆಲುವಿನತ್ತ ದಾಪುಗಾಲು
ಪ್ರತಿಭಾಪಾಟೀಲ್ ಆರಂಭಿಕ ಮುನ್ನಡೆ
ಹನೀಫ್ ನೆರವಿಗೆ ಸರ್ಕಾರ,ಸಿಬಿಐ
ಮಹಿಳಾ ರಾಷ್ಟ್ರಪತಿ?: ಮತಎಣಿಕೆ ಆರಂಭ
ಸರಣಿಸ್ಫೋಟ:ಏಳನೇ ಮರಣದಂಡನೆ