ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಪಾಧ್ಯಕ್ಷ ಚುನಾವಣೆ ಕಾಂಗೈ ಮನವಿ ಬಿಜೆಪಿ ನಿರಾಕರಣೆ
ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭೈರೋನ್ ಸಿಂಗ್ ಶೇಖಾವತ್ ಸೋತಿದ್ದರೂ ಕೂಡ ಉಪಾಧ್ಯಕ್ಷ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ಹುದ್ದೆಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಮಾಡಿರುವ ಮನವಿಯನ್ನು ತಿರಸ್ಕರಿಸಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು, ಎದುರಾಳಿ ಪಕ್ಷಕ್ಕೆ ಮುಕ್ತ ಕಣವನ್ನು ನೀಡಲು ಪಕ್ಷ ಸಿದ್ದವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸಂಸದಿಯ ವ್ಯವಹಾರಗಳ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಅವರು, ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಅನುಭವಿಸಿರುವ ಸೋಲಿನಿಂದ ಬಿಜೆಪಿ ಕಲಿತು ಚುನಾವಣೆಯಿಂದ ದೂರ ಸರಿದರೆ ಉತ್ತಮ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸ್ವರಾಜ್, ಚುನಾವಣೆಗಳು ಪ್ರಜಾಪ್ರಭುತ್ವದ ಸಾಮರ್ಥ್ಯದ ಅಳತೆಗೊಲು ಪರಾಭವ ಅನುಭವಿಸಿಯೂ ಮತ್ತೊಂದು ಹೊರಾಟಕ್ಕೆ ಪಕ್ಷ ಸಿದ್ದವಾಗಿದೆ.

ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ 24 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಶಿವಸೇನಾ ಪ್ರತಿಭಾ ಪಾಟೀಲ್ ಪರ ಮತ ಚಲಾಯಿಸಿದ್ದರಿಂದ ಶೇಖಾವತ್ ಹಿನ್ನಡೆಗೆ ಪ್ರಮುಖ ಕಾರಣ ಎಂದು ಅವರು ಹೇಳಿದರು.
ಮತ್ತಷ್ಟು
ಪ್ರತಿಭಾಗೆ ಸಂದ ಎಷ್ಟು ಮತ್ತು ಎಲ್ಲಿಂದ ?
ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್
ಪ್ರತಿಭಾಪಾಟೀಲ್ ಗೆಲುವಿನತ್ತ ದಾಪುಗಾಲು
ಪ್ರತಿಭಾಪಾಟೀಲ್ ಆರಂಭಿಕ ಮುನ್ನಡೆ
ಹನೀಫ್ ನೆರವಿಗೆ ಸರ್ಕಾರ,ಸಿಬಿಐ
ಮಹಿಳಾ ರಾಷ್ಟ್ರಪತಿ?: ಮತಎಣಿಕೆ ಆರಂಭ