ಬಲ್ಲ ಮೂಲಗಳ ಪ್ರಕಾರ ಆಸ್ಟ್ರೇಲಿಯಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಭಾರತೀಯ ಮೂಲದ ವೈದ್ಯ ಹನಿಫ್‌ನನ್ನು ಭಾರತಕ್ಕೆ ರವಾನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಪೋಟದಲ್ಲಿ ಭಾಗಿಯಾಗಿರುವ ಕಫೀಲ್ ಅಹ್ಮದ್‌ಗೆ ತನ್ನ ಮೊಬೈಲ್ ಸಿಮ್ ಕಾರ್ಡ್ ನೀಡಿದ ಆಧಾರದ ಮೇಲೆ ಹನೀಫ್‌ನನ್ನು ಸಂಚಿನಲ್ಲಿ ಭಾಗಿಯಾಗಿರುವ ಸಂಶಯದ ಆಧಾರದ ಮೇಲೆ ಆಸ್ಟ್ರೇಲಿಯಾ ಪೊಲೀಸರು ಬಂಧಿಸಿದ್ದರು.
ವಿಚಾರಣೆಯಲ್ಲಿ ಸ್ಪಷ್ಟ ದಾಖಲೆಗಳು ದೊರೆಯದ ಹಿನ್ನಲೆಯಲ್ಲಿ ಮತ್ತು ವಿನಾಕಾರಣ ಅವರನ್ನು ಬಂಧನದಲ್ಲಿಡುವುದು ಸಾಧ್ಯವಿಲ್ಲದ ಕಾರಣ ಭಾರತಕ್ಕೆ ಮರಳಿ ಕಳುಹಿಸುವ ನಿರ್ಧಾರವನ್ನು ಆಸ್ಟ್ರೇಲಿಯಾ ಸರ್ಕಾರ ತೆಗೆದುಕೊಂಡಿದೆ.
ಜಾನ್ ಹೊವರ್ಡ್ ನೆತೃತ್ವದ ಸರ್ಕಾರ ಕೂಡ ಈ ವಿಚಾರದಲ್ಲಿ ರಾಜಕೀಯ ವೀರೋಧವನ್ನು ಎದುರಿಸುತ್ತಿದೆ. ಹನಿಪ್‌ಗೆ ಈಗಾಗಲೆ ಅಲ್ಲಿನ ಸರ್ಕಾರ ಅಫರಾಧ ಪ್ರಮಾಣ ನೀಡಿ, ವಿಸಾ ರದ್ದು ಆದೇಶವನ್ನು ಹಿಂದಕ್ಕೆ ಪಡೆದಿದೆ. ಆದರೆ ಆಸ್ಟ್ರೇಲಿಯಾವನ್ನು ಬಿಟ್ಟು ತೆರಳದಂತೆ ಸೂಚನೆ ನೀಡಿತ್ತು.ಈಗ ಅಲ್ಲಿನ ಸರ್ಕಾರದ ಮೇಲೆ ಹನಿಫ್ ಸ್ವದೇಶಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಒತ್ತಾಯ ತರಲಾಗುತ್ತಿದೆ.
|