ಆಸ್ಟ್ರೇಲಿಯಾದಿಂದ ಮಹ್ಮದ್ ಹನೀಫ್‌ನನ್ನು ಸ್ವದೇಶಕ್ಕೆ ಕಳುಹಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ ಮತ್ತು ಆರೋಪವನ್ನು ಹೊತ್ತು ಸ್ವದೇಶಕ್ಕೆ ಮರಳುವುದು ನನಗೆ ಬೇಕಿಲ್ಲ.ಮೊದಲು ಹನೀಫ್ ಆರೋಪದಿಂದ ಮುಕ್ತನಾಗಿ ಸ್ವದೇಶಕ್ಕೆ ಮರಳಲಿ ಎಂದು ಆತನ ಪತ್ನಿ ಅರ್ಶಿಯಾ ಪಿರ್ಧೊಸ್ ಹೇಳಿದ್ದಾರೆ.
ಭಯೋತ್ಪಾದಕರಿಗೆ ಬೆಂಬಲ ನೀಡಿರುವ ಆರೋಪದ ಮೇಲೆ ಬ್ರಿಸ್ಬೇರ್ನ್‌ನಲ್ಲಿ ಬಂಧಿತನಾಗಿರುವ ಹನೀಫ್ ಸ್ವದೇಶಕ್ಕೆ ಮರಳುವ ಸಾದ್ಯತೆ ಇದ್ದು, ಈ ಸಂಬಂಧ ಮಾದ್ಯಮಗಳೊಂದಿಗೆ ಮಾತನಾಡಿದ ಹನೀಫ್‌ನ ಪತ್ನಿ ಪಿರ್ದೊಸ್ "ನನಗೆ ಅವನು ಸ್ವದೇಶಕ್ಕೆ ಮರಳುವುದು ಬೇಕಾಗಿಲ್ಲ ಆತ ತನ್ನ ಮೇಲಿರುವ ಆರೋಪಗಳು ಸುಳ್ಳು ಎಂದು ಸಾಬಿತು ಪಡಿಸಿದರೆ ಸಾಕು "
ಮೇಲ್ಬೋರ್ನ್‌ನಿಂದ ಬಂದ ವರದಿಗಳ ಪ್ರಕಾರ ಪ್ರಕರಣದ ವಿಚಾರಣೆಯಲ್ಲಿ ವಿಫಲವಾಗಿರುವ ಆಸ್ಟ್ರೇಲಿಯ ಸರಕಾರವು ಭಾರಿ ಟೀಕೆಗಳನ್ನು ಎದುರಿಸುತ್ತಿದ್ದು, ಪ್ರಕರಣಕ್ಕೆ ಅಂತ್ಯ ಕಾಣಿಸುವ ದೃಷ್ಟಿಯಿಂದ ಹನೀಫ್‌ನನ್ನು ಭಾರತಕ್ಕೆ ಕಳುಹಿಸುವ ಯೋಚನೆ ಮಾಡುತ್ತಿದೆ ಎಂದು ವರದಿಯಾಗಿದೆ.
ಹನೀಫ್ ಸಂಬಂಧಿಕ ಇಮ್ರಾನ್ ಸಿದ್ದಿಕಿ ಈಗಾಗಲೆ ಆಸ್ಟ್ರೇಲಿಯಾಗೆ ತೆರಳಿದ್ದು, ಅವರು ಹನೀಫ್‌ನ ನ್ಯಾಯವಾದಿಯೊಂದಿಗೆ ಭಾರತೀಯ ರಾಯಭಾರಿಗಳನ್ನು ಸೋಮವಾರ ಭೇಟಿಯಾಗಲಿದ್ದಾರೆ.
|