ರಾಷ್ಟ್ರಪತಿ ಚುನಾವಣೆ ಮುಕ್ತಾಯವಾದ ಮರುದಿನ ಭಾರತೀಯ ಜನತಾ ಪಕ್ಷವು ತೃತೀಯ ರಂಗದ ನಿಲುವನ್ನು ವಿರೋಧಿಸಿದ್ದು, ತೃತೀಯ ರಂಗದ ನಾಯಕರು ಆತ್ಮ ಪರಿಶೊಧನೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದೆ.
ಮಾದ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪಕ್ಷದ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು, ಕಳೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಭೈರೋನ್ ಸಿಂಗ್ ಶೆಖಾವತ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದವು. ಈಗ ಅದೇ ವ್ಯಕ್ತಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದರೆ ಕೆಟ್ಟ ವ್ಯಕ್ತಿ ಹೇಗೆ ಆಗಲಿಕ್ಕೆ ಸಾಧ್ಯ ? ಎಂದು ಪ್ರಶ್ನಿಸಿದರು.
ಎಲ್ಲ ನಾಯಕರಿಂದಲೂ ಮತ್ತು ಸಮಾಜದಿಂದ ಅಜಾತ ಶತ್ರು ಎನಿಸಿಕೊಂಡ ಶೇಖಾವತ್ ವಿರುದ್ದ ಇಲ್ಲಸಲ್ಲದ ಟೀಕೆ ಮಾಡಿದ್ದು ಅಲ್ಲದೆ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ನಿರ್ಧಾರ ತೆಗೆದುಕೊಂಡಿದ್ದು ತಪ್ಪು ಎಂದು ಅವರು ಹೇಳಿದರು.
ಬಿಜೆಪಿ ನೆತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರದ ರುಚಿ ಅನುಭವಿಸಿದ ಈ ಪಕ್ಷಗಳಿಗೆ ಈಗ ಆ ಪಕ್ಷ ಬೇಡವಾಗಿದೆ. ಪಕ್ಷವನ್ನು ಈಗ ಮತ್ತೇ ಕೊಮುವಾದಿ ಎಂದು ಕರೆಯಲಾಗುತ್ತಿದೆ. ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಬಿಜೆಪಿ ಕೊಮುವಾದಿಯಾಗುತ್ತದೆ. ಜಾತ್ಯಾತೀತೆ ಎಂದು ಹೇಳುವ ಈ ಪಕ್ಷಗಳಿಗೆ ಧರ್ಮ ನಿರಪೆಕ್ಷತೆಯ ಅರ್ಥವೇ ತಿಳಿದಿಲ್ಲ ಎಂದು ಆರೋಪಿಸಿದರು.
ರಾಷ್ಟ್ರಪತಿ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ನಿರ್ಧಾರ ತಳೆದ ತೃತೀಯ ರಂಗದ ಪಕ್ಷಗಳು ಸಾಧಿಸಿದ್ದಾದರೂ ಏನು ? ಎಂದು ಅವರು ಪ್ರಶ್ನಿಸಿದ್ದಾರೆ.
|